ನ್ಯೂಸ್

ಗ್ಯಾಸ್​ ರೀಫಿಲ್ಲಿಂಗ್​ ದಂಧೆಕೋರರಿಗೆ ಖಾಕಿ ಶಾಕ್

ರೇಷ್ಮೆ ನಗರ ಡೆಸ್ಕ್

ಕನಕಪುರ: ಅಕ್ರಮವಾಗಿ ಗ್ರಾಸ್​ ತುಂಬಿಸುತ್ತಿದ್ದ ಅಡ್ಡಗಳ ಮೇಲೆ ನಗರ ಪೋಲಿಸರು ದಾಳಿ ಮಾಡಿದ್ದು, 9 ಗ್ಯಾಸ್​ ಸಿಲೆಂಡರ್​ಗಳನ್ನು ವಶಕ್ಕೆ ಪಡೆದು,ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶನಿವಾರ ಸಂಜೆ ನಗರದ ಪೈಪ್​ಲೈನ್​ ರಸ್ತೆ, ಸಾಮ್ರಾಟ್​ ಅಶೋಕ್​ ನಗರದ ಉಮೇಶ್​ ಎಂಬುವವರ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ವಾಣಿಜ್ಯ ಬಳಕೆಯ ಸಿಲೆಂಡರ್​, 2 ಮನೆಬಳಕೆ ಸಿಲೆಂಡರ್​ ಹಾಗೂ ರೀಫಿಲ್ಲಿಂಗ್​ ಮಾಡುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಖಾಲಕ್​ ನಗರದ ಮೂರನೇ ಅಡ್ಡರಸ್ತೆಯಲ್ಲಿ ಅಯೂಬ್​ ಖಾನ್​ ಎನ್ನುವವರ ಮನೆಯ ಹಿಂಭಾಗದಲ್ಲಿ ಅಕ್ರಮವಾಗಿ ಗ್ಯಾಸ್​ ರೀಫಿಲ್ಲಿಂಗ್​ ಮಾಡುತ್ತಿದ್ದು, ದಾಳಿ ನಡೆಸಿದ ಪೊಲೀಸರು ರೀಫಿಲ್ಲಿಂಗ್​ ಸಾಮಗ್ರಿಗಳು ಹಾಗೂ ಎರಡು ಚಿಕ್ಕ ಮತ್ತು ಎರಡು ದೊಡ್ಡ ಗಾತ್ರದ ಸಿಲೆಂಡರ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆಯ ನಿರೀಕ್ಷಕ ಮನೋಹರ್​ ಹಾಗೂ ನಗರಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ಅನಂತ್​ರಾಮ್​ ಹಾಗೂ ಸಿಬ್ಬಂದಿ ಕಾರ್ಯಚರಣೆಯಲ್ಲಿದ್ದರು.