Hyderabad Ganesh: ಗಣೇಶ ಹಬ್ಬ ಅಂದ್ರೆ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಹೈದರಾಬಾದ್‌ನ ಖೈರತಾಬಾದ್‌ನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಪೊಲೀಸರೂ ಭಕ್ತರ ಜೊತೆ ಸೇರಿ ಸಖತ್ ಸ್ಟೆಪ್ ಹಾಕಿದ್ದಾರೆ. ಈ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖೈರತಾಬಾದ್‌ನ ಪ್ರಸಿದ್ಧ ‘ಬಡಾ ಗಣೇಶ’ ವಿಗ್ರಹವನ್ನು ಹುಸೇನ್ ಸಾಗರ್ ಕಡೆಗೆ ವಿಸರ್ಜನೆಗೆ ಕೊಂಡೊಯ್ಯುತ್ತಿದ್ದ ವೇಳೆ ಈ ದೃಶ್ಯ ಕಂಡುಬಂದಿದೆ. ಮೆರವಣಿಗೆಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ನಿಯೋಜಿಸಲಾಗಿದ್ದ ತೆಲಂಗಾಣ ಪೊಲೀಸರು, ಭರ್ಜರಿ ಹಾಡುಗಳ ಸದ್ದಿಗೆ ಕೆಲಕಾಲ ತಾವೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ತೀನ್ಮಾರ್, ಜಿಂಗಾಟ್ ಸೇರಿದಂತೆ ಭರ್ಜರಿ ಹಾಡುಗಳು ಮೊಳಗುತ್ತಿದ್ದಂತೆ ಪೊಲೀಸರು ಕೂಡ ಸಖತ್ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾರೆ. ಪೊಲೀಸರ ಈ ಸ್ಟೆಪ್ ಕಂಡು ಮೆರವಣಿಗೆಯಲ್ಲಿದ್ದ ಜನರು ಖುಷಿಪಟ್ಟಿದ್ದಾರೆ. ಕೆಲವರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
ಪುರುಷ ಪೊಲೀಸರಷ್ಟೇ ಅಲ್ಲದೆ ಮಹಿಳಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳೂ ಕೆಲಕಾಲ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಮೆರವಣಿಗೆಯಲ್ಲಿ ಭದ್ರತೆ, ಸಂಚಾರ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಪೊಲೀಸರ ಈ ಸಖತ್ ಸ್ಟೆಪ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಕರ್ತವ್ಯದ ನಡುವೆ ಪೊಲೀಸರ ಈ ಸಂಭ್ರಮದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವರು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದು, ‘ಕರ್ತವ್ಯದ ನಡುವೆಯೂ ಹಬ್ಬದ ಸಂಭ್ರಮ’ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. (ಏಜೆನ್ಸೀಸ್)