ನ್ಯೂಸ್

KGF ಖ್ಯಾತಿಯ ನಟಿ Shaambhawi ಪುತ್ರನಿಗೆ ಬ್ಲಡ್​ ಕ್ಯಾನ್ಸರ್​; ನಮ್ಮ ಗುಂಡಣ್ಣ, ಮರಿ ಗೂಂಡಾ ಥರಾ ಕಾಣ್ತಾ ಇದ್ದಾನೆ ಎಂದು ಭಾವುಕ ಪೋಸ್ಟ್​

ಬೆಂಗಳೂರು: ಬ್ಲಾಕ್​ಬಸ್ಟರ್​ ಚಿತ್ರ ಕೆಜಿಎಫ್​ ಚಿತ್ರ ಸೇರಿದಂತೆ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಶಾಂಭವಿ ವೆಂಕಟೇಶ್​ (Shaambhawi Venkatesh) ಸದ್ಯ ಗಂಡ ಹಾಗೂ ಇಬ್ಬರು ಅವಳಿ ಮಕ್ಕಳ ಜೊತೆಗೆ ಮುದ್ದಾದ ಸಂಸಾರ ಸಾಗಿಸುತ್ತಿದ್ದದ್ದಾರೆ. ಆದರೆ, ಇವರ ಸಂಸಾದರ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲಾ ಶಾಂಭವಿ ಅವರ ಜೀವನದಲ್ಲಿ ಭಾರಿ ದೊಡ್ಡ ಆಘಾತವೊಂದು ಎದುರಾಗಿದೆ.

ನಟಿ ಶಾಂಭವಿ ಅವರಿಗೆ ದುರ್ಗಾ ಮತ್ತು ದುಷ್ಯಂತ್ ಎನ್ನುವ ಎರಡು ಪುಟ್ಟ ಮಕ್ಕಳಿದ್ದಾರೆ. ಇದೀಗ ಮಗ ದುಷ್ಯಂತ್​ ಬ್ಲಡ್​ ಕ್ಯಾನ್ಸರ್​ಗೆ ತುತ್ತಾಗಿದ್ದು, ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮಗನ ಕುರಿತಾಗಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟಿ ಸುದೀರ್ಘ ಪೋಸ್ಟ್​ ಒಂದನ್ನು ಬರೆದಿದ್ದಾರೆ. ಪುಟ್ಟ ಕಂದನಿಗೆ ಬ್ಲಡ್ ಕ್ಯಾನ್ಸರ್ ಬಂದಿರೋದು ನೋಡಿ ಅಭಿಮಾನಿಗಳು ಸಹ ಭಾವುಕರಾಗಿದ್ದು, ಆದಷ್ಟು ಬೇಗ ಪುಟ್ಟ ಕಂದಮ್ಮ ಆರೋಗ್ಯವಾಗಿ ಬರಲಿ ಎಂದು ಹಾರೈಸಿದ್ದಾರೆ.

ಮಗನ ಕುರಿತಾಗಿ ನಟಿ ಭಾವುಕ ಪೋಸ್ಟ್​ 

ದುಷ್ಯೂಗೆ ತನ್ನ ತಲೆಗೂದಲು ತುಂಬಾ ಇಷ್ಟವಾಗಿತ್ತು. 3 ವರ್ಷದ ಇವನು ಹೇಯ್ರ್ ಕಟಿಂಗ್ ಸಮಯದಲ್ಲಿ ಇಲ್ಲಿ ಲೈನ್ ಬೇಕು ಅಲ್ಲಿ ಲೈನ್ ಬೇಕು ಅಂತ ಕಿವಿಯ ಅಕ್ಕ-ಪಕ್ಕ ಲೈನ್ ಹಾಕಿಸ್ಕೊಳ್ತಿದ್ದ!!! ಕಿಮೋಥೆರಪಿಯ ಹಲವಾರು ಸೈಡ್ ಎಫೆಕ್ಟ್​​ನಲ್ಲಿ ಕೂದಲುದುರುವದು ಕೂಡ ಒಂದು. ಥೆರಪಿಯ ಸೆಕೆಂಡ್ ಸೈಕಲ್ನಲ್ಲಿ ಶುರುವಾದ ಹೇರ್​​ ಫಾಲ್, ನೋಡ್-ನೋಡ್ತಿದ್ದಂತೆ 24 ಘಂಟೆಗಳಲ್ಲಿ ಮನೆ ತುಂಬಾ ದುಷ್ಯೂ ಕೂದಲು ಹರಡೋಕೆ ಶುರುವಾಯ್ತು. ಮಗುನ್ನ ಹೆಡ್ ಶೇವಿಂಗ್ ಮಾಡೋದಕ್ಕೆ ಒಪ್ಪಿಸೋದು ಕಷ್ಟದ ವಿಚಾರವಾಗಿತ್ತು. ಹೀಗಾಗಿ ಅವರಪ್ಪ ಕೂದಲು ತೆಗಿಸಿದರು, ಅವರನ್ನ ನೋಡಿ ದೂಷ್ಯು ಕೂಡ ಹೊಸ ಹೇರ್​​ ಸ್ಟೈಲ್ ಮಾಡಿಸ್ಕೋತಿನಿ ಅಂತಾ ಹೇಳ್ತಾ ಕೂದಲು ತೆಗೆಯೋಕೆ ಒಪ್ಪಿಕೊಂಡ. ಈಗ ನಮ್ಮ ಗುಂಡಣ್ಣ, ಮರಿ ಗೂಂಡಾ ಥರಾ ಕಾಣ್ತಾ ಇದ್ದಾನೆ ಎಂದು ವಿಡಿಯೋ ಸಮೇತ ನಟಿ ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ನಿಗೂಢರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿಯಾಗಿ ನಟಿಸಿದ್ದ ಶಾಂಭವಿ ಅವರು ಬಳಿಕ ಪಾರು, ಲಕ್ಷ್ಮಿ, ಗೀತಾಂಜಲಿ ಸೀರಿಯಲ್​​ನಲ್ಲಿ ಮಿಂಚಿದ್ದಾರೆ. ಪಾರು ಧಾರಾವಾಹಿಯಲ್ಲಿ ದಿಶಾ ಆಗಿ ಬದಲಾದ ಆಕೆ ವಿಲನ್ ಆಗಿ ಕಿರುತೆರೆಯಲ್ಲಿ ಅಬ್ಬರಿಸಿದ್ದರು. ಸ್ಯಾಂಡಲ್​ವುಡ್​ ಬ್ಲಾಕ್ ಬಾಸ್ಟರ್ ಸಿನಿಮಾ ಕೆಜಿಎಫ್ ಚಾಪ್ಟರ್ 1ರಲ್ಲಿ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದಲ್ಲಿಯೂ ನಾಯಕಿಯ ಗೆಳತಿಯಾಗಿ ಶಾಂಭವಿ ಕಾಣಿಸಿಕೊಂಡಿದ್ದರು. ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಎಕ್ಸ್ ಗರ್ಲ್ ಫ್ರೆಂಡ್ ಪಾತ್ರದಲ್ಲಿ ನಟಿಸಿದ್ದರು.

https://www.vijayavani.net/jo-bcci-karta-hai-yusuf-pathan-opines-on-team-india-not-travelling-to-pakistan-for-champions-trophy-2025-video

https://www.vijayavani.net/masood-azhars-speech-exposes-paks-duplicity-indias-stern-response