"ರಾಜಹಂಸ', "ಕೆರೆಬೇಟೆ'ಯಂತಹ ಕಂಟೆಂಟ್ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದ ಗೌರಿಶಂಕರ್ ಇದೀಗ ಮತ್ತೊಂದು ಹೊಸ ಸಿನಿಮಾದೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "ಕಾಮನ್ ಮ್ಯಾನ್'. ಇದು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಆ್ಯಕ್ಷನ್-ಕಟ್ ಹೇಳುತ್ತಿರುವ 106ನೇ ಚಿತ್ರವಾಗಿದ್ದು, ಸರುಭಿ ಫಿಲಂಸ್ ಬ್ಯಾನರ್ನಲ್ಲಿ ನರಸಿಂಹಮೂರ್ತಿ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಓಂ ಸಾಯಿಪ್ರಕಾಶ್, "ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂಬುದು ಚಿತ್ರದ ಒನ್ಲೈನ್. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ ಒಂದು ಆಸೆಯಿರುತ್ತದೆ. ಈ ಚಿತ್ರದ ನಾಯಕ ಒಬ್ಬ ಲಾಯರ್. ಆತ ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾಗುತ್ತಾನೆ. ನಂತರ ಆತ ಏನೇನು ಮಾಡಬಹುದು? ಸಮಾಜದಲ್ಲಿ ಏನಾದರೂ ಸುಧಾರಣೆ ತರುತ್ತಾನಾ? ಎಂಬುದನ್ನು ಕುತೂಹಲಕಾರಿ ಅಂಶಗಳೊಂದಿಗೆ ಹೇಳುವ ಪ್ರಯತ್ನ ಮಾಡಿದ್ದೇನೆ' ಎಂದರು. ಗೌರಿಶಂಕರ್ಗೆ ಸೋನಾ ಲಾದ್ವಾ ಜೋಡಿಯಾಗಿದ್ದು, ನಾಗೇಂದ್ರ ಅರಸ್, ರಮೇಶ್ ಭಟ್, ಬಲರಾಜವಾಡಿ, ಗಣೇಶ್ರಾವ್ ಕೇಸರ್ಕರ್. ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ತಾರಾಗಣದಲ್ಲಿದ್ದಾರೆ. ಉಳಿದಂತೆ ವಿನಯ್ ಚಂದ್ರ ಸಂಗೀತ, ಜೆ.ಜಿ. ಕೃಷ್ಣ, ದೀಪಕ್ ಕುಮಾರ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯಲ್ಲಿ ಸಿನಿಮಾ ಮೂಡಿಬಂದಿದೆ.
"ಕೆರೆಬೇಟೆ' ಬಳಿಕ ಹಲವು ಕಥೆಗಳು ಬಂದವು. ಆದರೆ, ಇಷ್ಟವಾಗಿರಲಿಲ್ಲ. ಆದರೆ, ನಾನು ಕಾದಿದ್ದೂ ಒಳ್ಳೆಯದೇ ಎಂಬಂತೆ ಬಯಸಿದಂತಹ ಪಾತ್ರವೇ ಹುಡುಕಿಕೊಂಡು ಬಂತು. ನನಗೆ ವಕೀಲನಾಗುವ ಆಸೆಯಿತ್ತು. ಅದು ಈ ಸಿನಿಮಾ ಮೂಲಕ ನೆರವೇರಿದೆ. ಓಂ ಸಾಯಿಪ್ರಕಾಶ್ ಸರ್ ಹೇಳಿದ ಈ ಕಥೆ ತುಂಬ ಇಷ್ಟವಾಯಿತು. ಅವರು ಅಂದುಕೊಂಡಂತೆಯೇ ಕಡಿಮೆ ಸಮಯದಲ್ಲಿ ಶೂಟಿಂಗ್ ಪೂರ್ಣಗೊಳಿಸಿದರು. ಜನವರಿ 20ರಂದು ಸೆಟ್ಟೇರಿದ ಸಿನಿಮಾ, ಶೂಟಿಂಗ್ ಮುಗಿಸಿದ್ದು ಸದ್ಯ ಪೋಸ್ಟ್&ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ.