ನ್ಯೂಸ್

ಕಂಡಕ್ಟರ್​ ಇಲ್ಲದೇ ಸಾಗಿದ ಬಸ್​ !


ಕೇರಳ: ಕರ್ನಾಟಕದ ಸಾರಿಗೆ ಬಸ್​ಗಳಲ್ಲಿ ಇತ್ತೀಚಿಗೆ ಚಾಲಕ ಕಂ ನಿರ್ವಾಹಕರಾಗಿ ಒಬ್ಬರೇ ಕೆಲಸ ನಿರ್ವಹಿಸುವುದನ್ನು ಕಂಡಿದ್ದೇವೆ. ಆದರೆ, ಕೇರಳದಲ್ಲಿ ಕಂಡಕ್ಟರ್​ಅನ್ನು ಬಿಟ್ಟು ಬಸ್ಸೊಂದು 2.5 ಕಿ.ಮೀ ಸಂಚರಿಸಿದ ಘಟನೆ ಕೇರಳದ ಪೊನ್​ಕುನ್ನಂನಲ್ಲಿ ನಡೆದಿದೆ.

ಘಟನೆ ವಿವರ: ಸಿಮೀತ ನಿಲುಗಡೆಯಲ್ಲಿ ಮುಂಡಕಾಯಂ-ಚಂಗನಾಶ್ಶೇರಿ ಮಾರ್ಗದಲ್ಲಿ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್ ಬುಧವಾರ ಡಿಪೋದಿಂದ ಹೊರಟಿದೆ. ಬೆಳಗ್ಗೆ 11.20ರ ವೇಳೆಗೆ ಪೊನ್​ಕುನ್ನಂ ಬಸ್​ ನಿಲ್ದಾಣದಲ್ಲಿ ಬಸ್​ನ ಮಹಿಳಾ ಕಂಡಕ್ಟರ್ ಬಸ್​ನ ಟ್ರಿಪ್​ ಶೀಟ್​ ನೀಡಲು ನಿಲ್ದಾಣದೊಳಗೆ ತೆರಳಿದ್ದಾಳೆ.

ಈ ವೇಳೆ ಬಸ್​ನ ಪ್ರಯಾಣಿಕರೊಬ್ಬರು ಮಾಡಿದ ಬೆಲ್​ ಸದ್ದು ಕೇಳಿಸಿ ಕೊಂಡ ಚಾಲಕ ಬಸ್​ ಚಲಾಯಿಸಿಕೊಂಡು ಬರೋಬ್ಬರಿ 2.5 ಕಿ.ಮೀ ಸಾಗಿದ್ದಾನೆ. ಐದು ನಿಮಿಷದ ಬಳಿಕ ಕಂಡಕ್ಟರ್​ ಇಲ್ಲದಿರುವುದು ಚಾಲಕನ ಗಮನಕ್ಕೆಬಂದಿದೆ. ಆ ವೇಳೆಗೆ ಬಸ್​ 18ನೇ ಮೈಲಿ ತಲುಪಿತ್ತು. ಕೊನೆಗೆ ಕಂಡಕ್ಟರ್​ ಬರುವಿಗೆ ಕಾದು ಅಲ್ಲಿಯೇ ಬಸ್​ ನಿಲ್ಲಿಸಿಕೊಂಡಿದ್ದನು.

ಲೇಡಿ ಕಂಡಕ್ಟರ್ ಬೇರೆ ಬಸ್ ಹಿಡಿದು ಸ್ಥಳಕ್ಕೆ ತೆರಳಿದ ಬಳಿಕ ಆ ಲಿಮಿಟೆಡ್ ಸ್ಟಾಪ್ ಬಸ್ ಮುಂದೆ ಸಾಗಿತು. (ಏಜೆನ್ಸೀಸ್​)