ನ್ಯೂಸ್

ನನ್ನ ಮೇಲೆ ದೂರು ದಾಖಲಿಸಿರುವುದು, ವೋಟ್​ ಬ್ಯಾಂಕ್​ ರಾಜಕಾರಣ: ಕೇರಳ ರಾಜ್ಯದ ವಿರುದ್ಧ ಸಂಸದೆ ಶೋಭಾ ತಿರುಗೇಟು

ನವದೆಹಲಿ: ಕೇರಳ ರಾಜ್ಯ ನನ್ನ ಮೇಲೆ ದೂರು ದಾಖಲಿಸಿದೆ. ಅವರು ರಾಷ್ಟ್ರ ವಿರೋಧಿ ಅಥವಾ ಸಮಾಜ ವಿರೋಧಿ ಚಟುವಟಿಕೆ ಮಾಡುವವರು ಇವರಿಗೆ ಕಾಣುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಸಮಾಜ ವಿರೋಧಿಗಳನ್ನು ಬಿಟ್ಟು ನನ್ನ ಮೇಲೆ ದೂರು ದಾಖಲಿಸಿರುವ ಅವರಿಗೆ ಮುಖ್ಯವಾಗಿರುವುದು ಕೇವಲ ವೋಟ್​ ಬ್ಯಾಂಕ್​ ಎಂದು ಕೇರಳ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಲಪ್ಪುರಂ ಬಳಿಯ ಕುಟ್ಟಿಪುರಂ ಗ್ರಾಮದ ಹಿಂದುಗಳಿಗೆ ನೀರು ಪೂರೈಕೆ ಮಾಡಿಲ್ಲ. ಅದಕ್ಕೆ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮ್ಮತಿಸಿದ್ದು ಎಂದು ಟ್ವೀಟ್​ ಮಾಡಿದ್ದ ಸಂಸದೆ ಶೋಭಾ ಅವರ ವಿರುದ್ಧ ಕೇರಳ ರಾಜ್ಯದಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಪೊಲೀಸರು ಧರ್ಮ, ಜನಾಂಗ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. (ಏಜೆನ್ಸೀಸ್​)