ನ್ಯೂಸ್

ಬಹ್ರೇನ್​ನಲ್ಲಿ ಕಮಾಲ್​ ಮಾಡಿದ ಭಾರತೀಯ; 71 ಕೋಟಿ ರೂ. Lottery ಗೆದ್ದು ತಾಯಿಯ ಕನಸು ನನಸು ಮಾಡಿದ ವ್ಯಕ್ತಿ

ನವದೆಹಲಿ: ಮನುಷ್ಯನಿಗೆ ಅದೃಷ್ಟ (Luck) ಯಾವಾಗ, ಹೇಗೆ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಸಾಮಾನ್ಯ ವ್ಯಕ್ತಿಗಳಿಗೆ ಲಾಟರಿಯಲ್ಲಿ (Lottery) ಬಂಪರ್​ ಹೊಡೆದಾಗ ನಮ್ಮ ಅದೃಷ್ಟ ಸರಿ ಇಲ್ಲ ಎಂದುಕೊಂಡಿರುತ್ತೇವೆ. ಆದರೆ, ಅದೆಲ್ಲಾ ಕಾಲದ ಮಹಿಮೆ ಎಂದರೆ ತಪ್ಪಾಗಲಾರದು. ಇದೀಗ ಅಂಥಹದ್ದೆ ಮಹಿಮೆಯೊಂದು ದೂರದ ಬಹ್ರೇನ್‌ನಲ್ಲಿ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿದ್ದು, ಲಕ್​ ಎಂದರೆ ಇದಪ್ಪಾ ಎಂದು ಹೇಳುವುದರಲ್ಲಿ ಯಾವದೇ ಸಂಶಯ ಬೇಡ.

ಬಹ್ರೇನ್​ನಲ್ಲಿ ಅಂಬುಲೆನ್ಸ್​ ನರ್ಸ್​ ಆಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ಮನು ಮೋಹನನ್​ ಎಂಬುವವರು ಲಾಟರಿಯಲ್ಲಿ (Lottery) 30 ಮಿಲಿಯನ್ ಬಹ್ರೇನ್ ದಿನಾರ್ ಅನ್ನು ಗೆದ್ದಿದ್ದಾರೆ. ಭಾರತ ದೇಶದ ರೂಪಾಯಿ ಪ್ರಕಾರ 71 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ. ಸದ್ಯ ಮನು ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. 

ಲಾಟರಿ (Lottery) ಗೆದ್ದ ಬಗ್ಗೆ ಮಾತನಾಡಿರುವ ಮನು, ನನ್ನ ತಂದೆ ತಾಯಿಯನ್ನು ಬಿಟ್ಟು ಹೋದ ಬಳಿಕ ಆಕೆ ನನ್ನನ್ನು ಸಾಕಲು ತುಂಬಾ ಕಷ್ಟಪಟ್ಟಿದ್ದಾರೆ. ನನ್ನನ್ನು ಸಾಕುವ ಸಲುವಾಗಿ ಇಟ್ಟಿಗೆ ಹಾಗೂ ಕಲ್ಲುಗಳನ್ನು ಹೊತ್ತಿದ್ದಾರೆ. ಬಹ್ರೇನ್​ಗೆ ಹೋದ ಬಳಿಕ ನಾನು ತುಂಬಾ ಸವಾಲುಗಳನ್ನು ಎದುರಿಸಿದೆ. ನಾನು ಹಾಗೂ ನನ್ನ ಸ್ನೇಹಿತರು ಲಾಟರಿ ಟಿಕೆಟ್​ಅನ್ನು ಖರೀದಿಸಲು ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆವು, ಇದಕ್ಕಾಗಿ ವೆಚ್ಚವನ್ನು ಸಹ ಕಡಿತಗೊಳಿಸಿದೆವು. 

ನಾನು ಕೆಲಸದಲ್ಲಿರುವಾಗ ಲಾಟರಿ ಗೆದ್ದ ವಿಚಾರ ತಿಳಿಯಿತು. ಆ ಬಳಿಕ ನನ್ನ ಗೆಳೆಯರೊಟ್ಟಿಗೆ ಈ ಮಾಹಿತಿಯನ್ನು ಹಂಚಿಕೊಂಡೆ. ಲಾಟರಿಯಲ್ಲಿ ಗೆದ್ದ ಹಣವನ್ನು ಸಾಲ ತೀರಿಸಲು, ಮನೆ ನಿರ್ಮಿಸಲು ಬಳಸುತ್ತೇವೆ. ನನ್ನ ತಾಯಿ ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಅವರು ಈಗ ಶಾಂತಿಯುತ ಮತ್ತು ಆರಾಮದಾಯಕ ಜೀವನ ನಡೆಸಬಹುದಾಗಿದೆ ಎಂದು ಲಾಟರಿ ವಿಜೇತ ಮನು ಮೋಹನನ್​ ಹೇಳಿದ್ದಾರೆ.