ಕೇರಳ: ಕೇರಳದ ಅಯ್ಮನಂನಲ್ಲಿ ವ್ಯಕ್ತಿಯೊಬ್ಬರು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಕೇರಳದ ಅಯ್ಮನಂ ಸಮೀಪದ ಕುಡಯಂಪಾಡಿ ಎಂಬಲ್ಲಿ ಪಾದರಕ್ಷೆ ಅಂಗಡಿ ನಡೆಸುತ್ತಿದ್ದ ಬಿನು ಕೆ ಸಿ (50) ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೆ ಬಿನು 5 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಬ್ಯಾಂಕ್‌ನ ಉದ್ಯೋಗಿಯೊಬ್ಬರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದ. ಜೊತೆಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್ನಿಂದ ಪ್ರತಿನಿತ್ಯ ಕರೆಗಳು ಬರುತ್ತಲೇ ಇತ್ತು.
ಪ್ರತಿನಿತ್ಯ ಸಾಲ ಮರುಪಾವತಿಸುವಂತೆ ಕಿರುಕುಳ ಮತ್ತು ಬೆದರಿಕೆಯಿಂದ ನೊಂದಿದ್ದ ಬಿನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿನು ಬ್ಯಾಂಕ್ನಿಂದ ಪಡೆದಿದ್ದ ಸಾಲವನ್ನ ತನ್ನ ಉದ್ಯೋಗಕ್ಕೆ ಬಳಸಿಕೊಂಡಿದ್ದ.
ಇತ್ತೀಚಿನ ದಿನಗಳಲ್ಲಿ ನಿರೀಕ್ಷೆಯ ಮಟ್ಟಿನ ವ್ಯಾಪಾರ ಆಗದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ನನ್ನ ತಂದೆ ಇದೇ ಬ್ಯಾಂಕಿನಿಂದ ಈ ಹಿಂದೆಯೂ ಸಾಲ ಪಡೆದಿದ್ದರು ಮತ್ತು ಸಂಪೂರ್ಣ ಹಣವನ್ನು ಮರುಪಾವತಿಸಿದ್ದರು. ಬ್ಯಾಂಕ್‌ನ ಮ್ಯಾನೇಜರ್ ಎಂದು ಹೇಳಲಾದ ಪ್ರದೀಪ್ ಎಂಬಾತ ನನ್ನ ತಂದೆಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದು ನನ್ನ ತಂದೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ನನ್ನ ತಂದೆ ಅವಮಾನ ತಡೆಯಲಾರದೆ ಇಂತಹ ನಿರ್ಧಾರವನ್ನ ಮಾಡಿದ್ದಾರೆ ಎಂದು ಎಂದು ಬಿನು ಅವರ ಮಗಳು ನಂದನಾ ಹೇಳಿದ್ದಾಳೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಂದು ಬಿನು ಕುಟುಂಬರು ಒತ್ತಾಯಿಸಿದ್ದು, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ.