ನ್ಯೂಸ್

ಕೇರಳ ಲಾಟರಿ ಮಾರಾಟ ಮಾಡುತ್ತಿದ್ದವರ ಬಂಧನ

ಗುಂಡ್ಲುಪೇಟೆ: ಕೇರಳ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಯನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಡಿವೈಎಸ್‌ಪಿ ಲಕ್ಷ್ಮಯ್ಯ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ವನರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಲೂಕಿನ ತೆರಕಣಾಂಬಿ ಗ್ರಾಮದ ವೆಂಕಟೇಶ ಹಾಗೂ ಹಂಗಳ ಗ್ರಾಮದ ನಾಗರಾಜು ಅವರಿಂದ 2 ಲಕ್ಷ ಮೌಲ್ಯದ 319 ಲಾಟರಿ ಟಿಕೆಟ್ ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಚರಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಾಹೇಬಗೌಡ, ಸಹಾಯಕ ಸಬ್‌ಇನ್ಸ್ ಪೆಕ್ಟರ್ ಮಹೇಶ್, ಮಂಜಣ್ಣ, ಚಿನ್ನಸ್ವಾಮಿ, ಬಸವರಾಜೇಂದ್ರ, ವಿಶೇಷ ವಿಭಾಗದ ಪೇದೆ ಮಹೇಶ್, ಚಾಲಕ ಸಂತೋಷ, ಬೀರೇಗೌಡ ಹಾಗೂ ಸಿಬ್ಬಂದಿ ಇದ್ದರು.