ನ್ಯೂಸ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲ ಮಂಗಳಮುಖಿ ಪತ್ರಕರ್ತೆ: ಕೇರಳದಲ್ಲಿ ವಿಶೇಷ ಕಾನೂನಿನಡಿ ನೋಂದಣಿಯಾದ ನಾಲ್ಕನೇ ಮದುವೆ

ಕೇರಳ: ಮೊದಲ ಮಂಗಳಮುಖಿ ಪತ್ರಕರ್ತೆ ಹೈಡಿ ಸಾದಿಯಾ ಅವರು ಅಥರ್ವ ಮೋಹನ್​ ಜತೆ ಇಂದು ಎರ್ನಾಕುಲಂನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕೇರಳ ರಾಜ್ಯದಲ್ಲಿ ನಡೆದ ಮಂಗಳಮುಖಿಯೊಂದಿಗಿನ ನಾಲ್ಕನೇ ಮದುವೆ ಇದಾಗಿದೆ. ಈ ಮದುವೆ ವಿಶೇಷ ಕಾಯ್ದೆಯಡಿ ನೋಂದಣಿಯಾಗಿದೆ.

2018ರಲ್ಲಿ ಇಶಾನ್​ ಮತ್ತು ಸೂರ್ಯ ಎಂಬುವ ಮಂಗಳಮುಖಿಯ ಮದುವೆ ನಡೆದಿತ್ತು. ಇದು ವಿಶೇಷ ಕಾನೂನಿನಡಿ ನೋಂದಣಿಯಾಗಿದ್ದ ಮೊದಲ ಮದುವೆಯಾಗಿತ್ತು. ಈ ಸಮಾರಂಭದಲ್ಲಿ ಆಗಿನ ಸಚಿವರು ಮತ್ತು ಗಣ್ಯರು ಭಾಗವಹಿಸಿದ್ದರು. (ಏಜೆನ್ಸೀಸ್​)