ನ್ಯೂಸ್

ಶಾಲಾ ಪಠ್ಯಪುಸ್ತಕಗಳಿಂದ ಕೈ ಬಿಡಲಾದ ವಿಷಯವನ್ನು ಪುನಃ ಸೇರಿಸಲು ಕ್ರಮ ಕೈಗೊಂಡ ಕೇರಳ ಸರ್ಕಾರ

ತಿರುವನಂತಪುರಂ: ಈ ಹಿಂದೆ ಶಾಲಾ ಪಠ್ಯಪುಸ್ತಕಗಳಿಂದ ಕೈ ಬಿಡಲಾದ ಮಹಾತ್ಮ ಗಾಂಧಿ ಮತ್ತು ನೆಹರೂ ಅವರಿಗೆ ಸಂಬಂಧಿಸಿದ ವಿಷಯವನ್ನು ಪುನಃ ಸೇರಿಸಲು ಕೇರಳ ಸರ್ಕಾರವು ಕ್ರಮ ಕೈಗೊಂಡಿದೆ ಎಂದು ರಾಜ್ಯ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಶನಿವಾರ ಹೇಳಿದ್ದಾರೆ.

ಶಿವನ್‌ಕುಟ್ಟಿ , 'ಸೆಪ್ಟೆಂಬರ್‌ನಲ್ಲಿ ಓಣಂ ವಿರಾಮದ ನಂತರ ತರಗತಿಗಳು ಪುನರಾರಂಭಗೊಂಡ ನಂತರ, ನವೀಕರಿಸಿದ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಒದಗಿಸಲಾಗುವುದು. ವಿದ್ಯಾರ್ಥಿಗಳು ನಮ್ಮ ಇತಿಹಾಸ, ಅರ್ಥಶಾಸ್ತ್ರ ಮತ್ತು ವಿಜ್ಞಾನದ ಬಗ್ಗೆ ಸುಸಜ್ಜಿತವಾದ ತಿಳುವಳಿಕೆಯನ್ನು ಪಡೆಯುವುದು ಅತ್ಯಗತ್ಯ' ಎಂದು ಹೇಳಿದರು.

ಕೇಂದ್ರವು ಇಂತಹ ಎಲ್ಲಾ ವಿಷಯಗಳನ್ನು ಕೈ ಬಿಟ್ಟಿದೆ. ಆದರೆ ಪಿಣರಾಯಿ ವಿಜಯನ್ ಸರ್ಕಾರವು ವಿದ್ಯಾರ್ಥಿಗಳಿಗೆ ನಿಜವಾದ, ಸ್ಫೂರ್ತಿದಾಯಕ ಕೃತಿಗಳ ಬಗ್ಗೆ ಕಲಿಸಲಾಗುವುದು ಎಂದು ಈ ಹಿಂದೆ ಭರವಸೆ ನೀಡಿತ್ತು.

ಇದೇ ವೇಳೆ ಗುಜರಾತ್ ಗಲಭೆ ಕೂಡ ಇತಿಹಾಸ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ ಎಂಬ ವರದಿಗಳಿವೆ.