ನ್ಯೂಸ್

VIDEO| ಕಲ್ಯಾಣ ಮಂಟಪದ ವೇದಿಕೆಯಲ್ಲಿ ವಧುವಿನ ನಿರೀಕ್ಷೆಯಲ್ಲಿದ್ದ ವರನಿಗೆ ಕಾದಿತ್ತು ಅಚ್ಚರಿ​!

ಕೊಚ್ಚಿ: ಕೇರಳದ ವಧುವೊಬ್ಬಳು ಡ್ಯಾನ್ಸ್​ ಮಾಡುತ್ತಲೇ ಕಲ್ಯಾಣ ಮಂಟಪಕ್ಕೆ ಪ್ರವೇಶಿಸಿ ವರ ಹಾಗೂ ಅತಿಥಿಗಳಿಗೆ ಸರ್ಪ್ರೈಸ್​ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿರೋ ವಧುವನ್ನು ಅಂಜಲಿ ಎಂದು ಗುರುತಿಸಲಾಗಿದ್ದು, ಆಕೆಯೊಂದಿಗೆ ಸ್ನೇಹಿತೆಯರು ಮತ್ತು ಮಕ್ಕಳು ಕೂಡ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಕೆಂಪು ಬಣ್ಣದ ಸೀರೆಯುಟ್ಟಿರುವ ಅಂಜಲಿ, ಮಲೈಯಿರು ಎಂಬ ಮಲಯಾಳಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಹೀಗೆ ಹೆಜ್ಜೆ ಹಾಕುತ್ತಲೇ ವರ ನಿಂತಿದ್ದ ವೇದಿಕೆ ಮೇಲೆ ತೆರಳಿದ್ದಾಳೆ. ಆ ವೇಳೆ ಆಕೆಗೆ ಸ್ನೇಹಿತೆಯರು ಮತ್ತು ಪುಟಾಣಿ ಮಕ್ಕಳು ಸಾಥ್​ ನೀಡಿದ್ದಾರೆ. ಬಂದಂತಹ ಅತಿಥಿಗಳು ವಧುವಿನ ಕುಣಿತವನ್ನು ಎಂಜಾಯ್​ ಮಾಡಿದ್ದಾರೆ.

ಮಲಯಾಳಂ ವೆಬ್​ಸೈಟ್​ ಮನೋರಮಾ ಪ್ರಕಾರ ಭಾವಿ ಪತಿ ವರುಣ್​ಗೆ ಸರ್ಪ್ರೈಸ್​ ಉಡುಗೊರೆ ನೀಡಲು ಅಂಜಲಿ ಮುಂಚೆಯೇ ಪ್ಲ್ಯಾನ್​ ಮಾಡಿದ್ದಳು ಎಂದು ಹೇಳಲಾಗಿದೆ.

ಈ ವಿಡಿಯೋವನ್ನು ಕರಣ್​ ಕಪೂರ್​ ಎಂಬುವರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಈವರೆಗೂ ಸುಮಾರು 63 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ವಧುವಿನ ಕುಣಿತ ಕಂಡು ಸಾವಿರಾರು ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. (ಏಜೆನ್ಸೀಸ್​)