ಬೆಂಗಳೂರು: ಕಿಯೋನಿಕ್ಸ್‌ನಲ್ಲಿ ಕಳೆದ ಸರ್ಕಾರದ ಅವದಿಯಲ್ಲಿ ನಡೆದ ಹಗರಣಗಳನ್ನು ನಾವು ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ(Keonics scam is not to be taken lightly) ಎಂದು ಅಧ್ಯಕ್ಷ ಶರತ್ ಬಚ್ಚೇಗೌಡ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೆಂಡರ್ಸ್‌ಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಸರ್ಕಾರದ ಖಜಾನೆಗೆ ನಷ್ಟವಾಗಿದೆ. ಆ ನಷ್ಟದ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ತನಿಖೆಯನ್ನು ಗಂಭೀರವಾಗಿ ನಡೆಸುತ್ತೇವೆ ಎಂದರು.
ಮಹೇಶ್ವರ್ ರಾವ್ ಸಮಿತಿ ವರದಿ ಇದೆ. 2018ರಿಂದ 23ವರೆಗೆ ನಡೆದ ಹಣ ವರ್ಗಾವಣೆ. ಇದರ ಬಗ್ಗೆ ಗಮನ ಕೊಟ್ಟು ಪರಿಶೀಲಿಸುತ್ತಿದೆ. ಈಗಾಗಲೇ ಒಂದು ಸಾವಿರ ಫೈಲ್ ಆಗಿದೆ. ಇನ್ನು ಎರಡು ಮೂರು ಸಾವಿರ ಫೈಲ್ ಬಾಕಿ ಇವೆ. ಯಾರು ತಪ್ಪಿತಸ್ತರಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಕೋರ್ಟ್‌ಗೆ ತಂದು ಶಿಕ್ಷೆ ಕೊಡಿಸಬೇಕು. ಪ್ರಸ್ತುತ ಮಾಡಿರುವ ತನಿಖೆಯಲ್ಲಿ ಅಕೌಂಟೆಂಟ್ ಜನರಲ್ ವರದಿ ಪ್ರಕಾರ ಶೇ. 30 ರಿಂದ 300 ರವರೆಗೆ ವ್ಯತ್ಯಾಸವಿದೆ. ಮೂರು ಪಟ್ಟಿಗಿಂತ ಜಾಸ್ತಿ ಖರೀದಿಯಾಗಿದೆ ಎಂದು ತಿಳಿಸಿದರು.
ಕಿಯೋನಿಕ್ಸ್ ವೆಂಡಸ್ ಜತೆ ನಾನು ಹಾಗೂ ಸಚಿವರು ಚರ್ಚೆ ಮಾಡಿದ್ದೇವೆ. ತ್ವರಿತವಾಗಿ ವೆಂಡರ್ಸ್‌ಗಳ ಸಮಸ್ಯೆ ಪರಿಹರಿಸುತ್ತೇವೆ ಎಂದು ಶರತ್ ಬಚ್ಚೇಗೌಡ ಹೇಳಿದರು.