ನ್ಯೂಸ್

ಶೌಚಾಲಯದಲ್ಲಿ ಮದುವೆಯಾದ ಜೋಡಿ; ಈ ಸ್ಥಳವನ್ನು ಆಯ್ಕೆ ಮಾಡಲು ಕಾರಣ ವಿಶೇಷ..

ನವದೆಹಲಿ: ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಮದುವೆ ಮಂಟಪ, ಚರ್ಚ್ ಅಥವಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಬೇಕೆಂದು ಬಯಸುತ್ತಾರೆ. ಇದೀಗ ಡೆಸ್ಟಿನೇಶನ್ ವೆಡ್ಡಿಂಗ್ ಕ್ರೇಜ್ ಜನರಲ್ಲೂ ಹಬ್ಬಿದೆ.  ಆದರೆ  ಇಲ್ಲೊಂದು ಜೋಡಿ ಎಲ್ಲ ಸ್ಥಳಗಳನ್ನು ಬಿಟ್ಟು ಶೌಚಾಲಯದಲ್ಲಿ ಮದುವೆಯಾಗಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಲೋಗನ್ ಅಬ್ನಿ ಮತ್ತು ಟಿಯಾನಾ ಎಲಿಸ್ಟಾಕ್ ಎಚ್​ಒಪಿ ಗ್ಯಾಸ್​​ ಸ್ಟೇಶನ್​ನಲ್ಲಿರುವ  ಶೌಚಾಲಯದಲ್ಲಿ ಜೋಡಿ ವಿವಾಹವಾದರು ಮತ್ತು ಇಲ್ಲಿಯೇ ಅವರು ಒಟ್ಟಿಗೆ ವಾಸಿಸುವ ಮತ್ತು ಸಾಯುವ ಪ್ರತಿಜ್ಞೆ ಮಾಡಿದರು.  ಫೆಬ್ರವರಿ 14 ರಂದು ಕೆಂಟುಕಿಯ ಶೌಚಾಲಯದಲ್ಲಿ ದಂಪತಿ  ವಿವಾಹವಾದರು.  

ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೀರುವ ಜೋಡಿಗಳ ಮದ್ಯೆ ಈ ಜೋಡಿ ವಿಶೇಷವಾಗಿ ಮದುವೆಯಾಗಲು  ಹೀಗೆ ಮಾಡಿದ್ದಾರೆ. ಈ ಮದುವೆಗೆ ಸಂಬಂಧಿಸಿದ ತಮಾಷೆಯ ಕಥೆಯನ್ನು ತನ್ನ ಮಕ್ಕಳಿಗೆ ಹೇಳಲು ಈ ಜೋಡಿ ಎಲ್ಲರಿಗಿಂತ ವಿಭಿನ್ನವಾಗಿ ಮದುವೆಯಾಗಿದ್ದಾರೆ.  

ಈ ಐಡಿಯಾ ಬಂದಿದ್ದು ಹೀಗೆ...HOP ಶಾಪ್ ತನ್ನ ವಿಶಿಷ್ಟ ಸ್ನಾನಗೃಹಗಳಿಗೆ ಹೆಸರುವಾಸಿಯಾಗಿದೆ.  ಬಾತ್ರೂಮ್ನಲ್ಲಿ ಮದುವೆಯಾಗಲು ನಿರ್ಧರಿಸುತ್ತಿದ್ದೇವೆ. ಇದನ್ನು ನಾವು ತಮಾಷೆಗಾಗಿ ಹೇಳುತ್ತಿದ್ದರೂ, ನಂತರ  ನಾವು ಅಂದುಕೊಂಡಂತೆ ಮದುವೆಯಾಗಲು ಸಾಧ್ಯವಾಯ್ತು. ಇದು ಮದುವೆಗೆ ವಿಭಿನ್ನ ಸ್ಥಳವಾಗಲಿದೆ ಎಂದು ನಿರ್ಧರಿಸಿ ಬಾಸ್​​ ಬಳಿ ಕೇಳಿದಾರ ಅವರೂ ಕೂಡಾ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಅಲ್ಕೇ ಮದುವೆ ಆಗಲಿ ನಿರ್ಧೆರಿಸಿದೇವು. HOP ಶಾಪ್ ಕೂಡ ಈ ಮದುವೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಶೌಚಾಲಯದಲ್ಲಿ ಡಿಸ್ಕೋ ಬಾಲ್ ಅಳವಡಿಸಲಾಗಿದ್ದು, ಸಾಕಷ್ಟು ಅಲಂಕಾರ ಮಾಡಲಾಗಿತ್ತು. ಮದುವೆಗೆ ಇಬ್ಬರ ಸಂಬಂಧಿಕರೂ ಬರಬೇಕು. ಪುರುಷರ ಶೌಚಾಲಯದಲ್ಲಿ ದಂಪತಿ ಪರಸ್ಪರ ವಿವಾಹವಾದರು ಮತ್ತು ಈ ಸಮಯದಲ್ಲಿ ಎಲ್ಲರೂ ಸಂತೋಷವಾಗಿ ಭಾಗಿಯಾಗಿದ್ದರು. ನಿಜವಾಗಿಯೂ ಈ ಮದುವೆ ಎಲ್ಲಕ್ಕಿಂತ ಭಿನ್ನವಾಗಿತ್ತು.