ಕೆ.ಆರ್.ಪೇಟೆ: ಜೂನ್ 27 ರ ಶುಕ್ರವಾರ ತಾಲೂಕು ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ಕೆಂಪೇಗೌಡರ ಜಯಂತಿ ಆಚರಣೆಯ ತಾಲೂಕು ಮಟ್ಟದ ಅಕಾರಿಗಳು ಮತ್ತು ಸಂಘ ಸಂಸ್ಥೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ಒಬ್ಬ ಆದರ್ಶ ನಾಯಕ. ಜಾತ್ಯತೀತ ತಳಹದಿಯ ಮೇಲೆ ಆಡಳಿತ ನಡೆಸಿದ ಕೆಂಪೇಗೌಡರ ದೂರದೃಷ್ಟಿಯ ಲವಾಗಿ ಬೆಂಗಳೂರು ನಗರ ನಿರ್ಮಾಣವಾಗಿದೆ. ಕೆಂಪೇಗೌಡರ ಬೆಂಗಳೂರು ಇಂದು ಕೆಂಪೇಗೌಡರ ಪರಿಕಲ್ಪನೆಯನ್ನು ಮೀರಿ ಬೆಳೆದು ಅಂತಾರಾಷ್ಟ್ರೀಯ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇಂತಹ ಮಹಾನ್ ನಾಯಕ ಕೇವಲ ಒಕ್ಕಲಿಗರ ಪ್ರತಿನಿಯಲ್ಲ. ಸಮಸ್ತ ಸಮುದಾಯಗಳ ಔನತ್ಯಕ್ಕೆ ಶ್ರಮಿಸಿದ ಕೆಂಪೇಗೌಡರು ರಾಜಪ್ರಭುತ್ವಕ್ಕೆ ಆದರ್ಶಪ್ರಾಯರು. ನಾಡಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಚರಿಸಲಾಗುವ ಕೆಂಪೇಗೌಡರ ಜಯಂತಿಯಲ್ಲಿ ಎಲ್ಲ ಸಮುದಾಯಗಳು ಭಾಗಿಯಾಗಬೇಕು. ಈ ದಿಕ್ಕಿನಲ್ಲಿ ಅಕಾರಿಗಳು ಮತ್ತು ಸಭೆಯಲ್ಲಿ ಭಾಗವಹಿಸಿರುವ ಸಂಘ ಸಂಸ್ಥೆಗಳ ಪ್ರತಿನಿಗಳು ಶ್ರಮಿಸೋಣ ಎಂದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಹೊರಾಂಗಣದ ಬಯಲಿನಲ್ಲಿ ಕೆಂಪೇಗೌಡರ ಜಯಂತ್ಯುತ್ಸವ ವೇದಿಕೆ ನಿರ್ಮಿಸಲು ಸಭೆ ತೀರ್ಮಾನಿಸಿತು. ಜಯಂತಿಯ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕಾರ್ಯಕ್ರಮದ ಮುಖ್ಯ ವೇದಿಕೆಯವರೆಗೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಸಭೆ ನಿರ್ಧರಿಸಿತು.
ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಕಾರ್ಯನಿರ್ವಹಣಾಕಾರಿ ಕೆ.ಸುಷ್ಮಾ, ಪುರಸಭೆಯ ಅಧ್ಯಕ್ಷೆ ಪಂಕಜಾ ಪ್ರಕಾಶ್, ಪುರಸಭೆ ಮುಖ್ಯಾಕಾರಿ ನಟರಾಜ್, ಕ್ಷೇತ್ರ ಶಿಕ್ಷಣಾಕಾರಿ ವೈ.ಕೆ.ತಿಮ್ಮೇಗೌಡ, ಗ್ರಾಮಾಂತರ ಪೊಲೀಸ್ ನಿರೀಕ್ಷಕ ಆನಂದೇಗೌಡ, ಸಿಡಿಪಿಒ ವಿದ್ಯಾವತಿ, ಸಮಾಜ ಕಲ್ಯಾಣ ಇಲಾಖೆಯ ಅಕಾರಿ ದಿವಾಕರ್, ನೀರಾವರಿ ಇಲಾಖೆಯ ಇಂಜಿನಿಯರ್ ಚಂದ್ರೇಗೌಡ, ವಲಯ ಅರಣ್ಯಾಕಾರಿ ಅನಿತಾ ಸೇರಿದಂತೆ ವಿವಿಧ ಇಲಾಖೆಯ ಅಕಾರಿಗಳು, ತಾಲೂಕು ಒಕ್ಕಲಿಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣ ತಿಲಕ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎ.ಬಿ.ಕುಮಾರ್, ಕರವೇ ಅಧ್ಯಕ್ಷ ಶ್ರೀನಿವಾಸ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸೋಮಶೇಖರ್, ಸೇರಿದಂತೆ ಹಲವರು ಸಭೆಯಲ್ಲಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.