ನ್ಯೂಸ್

ಶಾಹೀನ್​ಬಾಗ್​ ಪ್ರತಿಭಟನಾಕಾರರಿಗೆ ಬಿರ್ಯಾನಿ ವ್ಯವಸ್ಥೆ ಮಾಡುತ್ತಿದ್ದಾರೆ ಅರವಿಂದ್​ ಕೇಜ್ರಿವಾಲ್​; ಯೋಗಿ ಆದಿತ್ಯನಾಥ್​ ಆರೋಪ

ನವದೆಹಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

ದೆಹಲಿಯ ಬಾದರ್​ಪುರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್​ 370ನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದರಿಂದ ಪಾಕಿಸ್ತಾನ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ತುಂಬ ನೋವಾಗಿದೆ ಎಂದು ಸಿಎಂ ಯೋಗಿ ವ್ಯಂಗ್ಯವಾಡಿದ್ದಾರೆ.

ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ, ಅಭಿವೃದ್ಧಿ, ರಾಷ್ಟ್ರೀಯತೆಗಳು ಇದ್ದರೆ ಮತ್ತೊಂದೆಡೆ ದೇಶ ಒಡೆಯುವ ಶಕ್ತಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಮತ್ತು ಅರವಿಂದ್​ ಕೇಜ್ರಿವಾಲ್​ ಇದ್ದಾರೆ. ದೆಹಲಿ ಚುನಾವಣೆಯಲ್ಲಿ ಮತ ಹಾಕುವ ಜನರು ಯೋಚಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಬಿಜೆಪಿ ಭಯೋತ್ಪಾದನೆಯೆಡೆಗೆ ಶೂನ್ಯ ಸಹಿಷ್ಣುತಾ ಮನೋಭಾವ ಹೊಂದಿದೆ. ಆದರೆ ಕೇಜ್ರಿವಾಲ್​ ಶಾಹೀನ್​ಬಾಗ್​ನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಬಿರ್ಯಾನಿ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕಿಡಿಕಾರಿದ್ದಾರೆ.(ಏಜೆನ್ಸೀಸ್​)