ಮುಂಬೈ: ಇತ್ತೀಚೆಗೆ ಸೌತ್ ಬ್ಯೂಟಿ ಕೀರ್ತಿ ಸುರೇಶ್(Keerthy Suresh) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೆ ಇದೆ. ಆದರೂ ಸದ್ಯ ಅವರು ಬೇಬಿ ಜಾನ್ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಡಿಸೆಂಬರ್ 25ರಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ‘ಬೇಬಿ ಜಾನ್’ ಕೀರ್ತಿ ಸುರೇಶ್ ಅವರ ಮೊದಲ ಬಾಲಿವುಡ್ ಚಿತ್ರ. ಚಿತ್ರದ ಪ್ರಚಾರದ ನಿಮಿತ್ತ ಕೀರ್ತಿ ಈ ದಿನಗಳಲ್ಲಿ ಮುಂಬೈನಲ್ಲಿದ್ದಾರೆ.
ಇದನ್ನು ಓದಿ: ಖಾನ್ ತ್ರಯರಿಗಿಂತ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಬಿಟೌನ್ನ ಮತ್ತೋರ್ವ ಖಾನ್; ₹ 25000 ಕೋಟಿ ಕಲೆಕ್ಷನ್ | Bollywood
ಇತ್ತೀಚೆಗೆ ಪಾಪರಾಜಿಗಳೊಂದಿಗೆ ಕೀರ್ತಿ ಕಿರಿಕಿರಿಗೊಂಡಿರುವ ವಿಡಿಯೋವೊಂದು ಹರಿದಾಡುತ್ತಿದೆ. ಅದಕ್ಕೂ ಕಾರಣವಿದೆ. ನಟಿಯನ್ನು ಕೃತಿ ಎಂದು ಕರೆಯಲಾಗಿದೆ. ಅದಕ್ಕೆ ಕೋಪಗೊಂಡರು ನಗುತ್ತಲೇ ಅದು ಕೃತಿ ಅಲ್ಲ ಕೀರ್ತಿ ಎಂದು ಹೇಳಿದ್ದಾರೆ.
ಆದಾದ ಬಳಿಕ ಕೀರ್ತಿ ಅವರನ್ನು ದೋಸೆ ಎಂದು ಕರೆದಿದ್ದಾರೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಕೀರ್ತಿ ಸುರೇಶ್ ತಮಗೆ ದೋಸೆ ಎಂದರೆ ಬಲು ಇಷ್ಟ ಎಂದು ಹೇಳಿದ್ದರು. ಬಿರಿಯಾನಿ ಅಥವಾ ದೋಸೆ ಯಾವುದನ್ನು ಸವಿಯಲು ಇಷ್ಟ ಪಡುತ್ತೀರಿ ಎಂದರೆ ಕೀರ್ತಿ ಸುರೇಶ್ ತಮಗೆ ದೋಸೆಯೇ ಇಷ್ಟ ಎಂದು ಹೇಳಿದ್ದರು. ಅದೇ ವಿಚಾರವಾಗಿ ಪಾಪಾರಾಜಿಗಳು ದೋಸೆ ಎಂದು ಕರೆದಿದ್ದಾರೆ. ಮೊದಲಿಗೆ ಕೃತಿ ಎಂದು ಕರೆದಾಗ ನಟಿ ಕೃತಿ ಅಲ್ಲ ಕೀರ್ತಿ ಎಂದು ಸರಿಪಡಿಸಿದ್ದಾರೆ. ಬಳಿಕ ದೋಸೆ ಎಂದು ಕರೆದಾಗ ಅದು ಕೀರ್ತಿ ದೋಸೆ ಅಲ್ಲ, ಕೀರ್ತಿ ಸುರೇಶ್. ನನಗೆ ದೋಸೆ ಇಷ್ಟ ಎಂದು ಉತ್ತರಿಸಿದ್ದಾರೆ. ಬಳಿಕ ನಗುತ್ತಲೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ವರುಣ್ ಧವನ್ಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಿರುವ ಬೇಬಿ ಜಾನ್ ಚಿತ್ರವು ತಮಿಳಿನ ‘ಥೇರಿ’ಯ ರಿಮೇಕ್ ಆಗಿದೆ. ಥೇರಿ ಸಿನಿಮಾದಲ್ಲಿ ದಳಪತಿ ವಿಜಯ್ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದರು. ಆದರೆ ಬೇಬಿ ಜಾನ್ ಅನ್ನು ಅಟ್ಲಿ ನಿರ್ಮಿಸಿದ್ದು ಕಾಲಿಸ್ ನಿರ್ದೇಶಿಸಿದ್ದಾರೆ. ವರುಣ್ ಧವನ್ ಜತೆಗೆ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಹೊಸ ಮತ್ತು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್)