ನ್ಯೂಸ್

Photos: ಓಣಂ ಪ್ರಯುಕ್ತ ನಟಿ ಕೀರ್ತಿ ಸುರೇಶ್​ ಅವರ ಸಾಕು ನಾಯಿಗಳಿಗೆ ರೇಷ್ಮೆ ಅಂಗಿ, ಪಂಚೆ!

ಬಹುಭಾಷಾ ನಟಿ ಕೀರ್ತಿ ಸುರೇಶ್​ ಓಣಂ ಹಬ್ಬವನ್ನು ಭರ್ಜರಿಯಾಗಿಯೇ ಆಚರಣೆ ಮಾಡಿದ್ದಾರೆ. ಕುಟುಂಬದೊಟ್ಟಿಗೆ ಸೇರಿ ಸಂಭ್ರಮದಿಂದಲೇ ಹಬ್ಬ ಮಾಡಿದ್ದಾರೆ. ಜತೆಗೆ ಮನೆಯ ವಿಶೇಷ ಸದಸ್ಯರಿಗೆ ರೇಷ್ಮೆ ಅಂಗಿ ಮತ್ತು ಪಂಚೆ ತೊಡಿಸಿ ಓಣಂ ಆಚರಿಸಿದ್ದಾರೆ. ಮನೆ ಮಂದಿಯೆಲ್ಲ ರೇಷ್ಮೆ ದಿರಿಸಿನಲ್ಲಿ ಕಾಣಿಸಿಕೊಂಡು ಫೋಟೋಗಳಿಗೆ ಪೋಸ್​ ನೀಡಿದ್ದು ಒಂದೆಡೆಯಾದರೆ, ಮನೆಯಲ್ಲಿನ ಎರಡು ಸಾಕು ನಾಯಿಗಳಿಗೂ ರೇಷ್ಮೆ ಪಂಚೆ ಮತ್ತು ರೇಷ್ಮೆ ಅಂಗಿ ತೊಡಿಸಿ ಆ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಾಕು ನಾಯಿಗಳ ಫೋಟೋಗಳು ಎಲ್ಲೆಡೆ ವೈರಲ್​ ಆಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಾರೆಯಾಗಿ ಕೀರ್ತಿ ಸುರೇಶ್​ ಓಣಂ ಹಬ್ಬದ ಸೆಲೆಬ್ರೆಷನ್​ ಹೇಗಿತ್ತು ಎಂಬುದಕ್ಕೆ ಇಲ್ಲಿ ಒಂದಷ್ಟು ಫೋಟೋಗಳಿವೆ.