ನ್ಯೂಸ್

KCET Results 2025: ರಾಜ್ಯ ಸಿಇಟಿ ಫಲಿತಾಂಶ ಪ್ರಕಟ; ಇಲ್ಲಿದೆ ನೋಡಿ ವಿವರ

KCET Results 2025: ವಿದ್ಯಾರ್ಥಿಗಳ ಕಾತರಕ್ಕೆ ಕಡೆಗೂ ತೆರೆ ಬಿದ್ದಿದ್ದು, 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಮಧ್ಯಾಹ್ನ 2 ಗಂಟೆಯ ನಂತರ ಪ್ರಾಧಿಕಾರದ ವೆಬ್​ಸೈಟ್​ನಲ್ಲಿ ನೋಡಲು ಲಭ್ಯವಾಗಲಿದೆ.

ಇಂದು 11 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್​ ಭಾಗಿಯಾಗಿ, ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 3.30 ಲಕ್ಷ ವಿದ್ಯಾರ್ಥಿಗಳ ಪೈಕಿ 3,11,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸಚಿವರು ತಿಳಿಸಿದರು.

ವಿವಿಧ ವಿಭಾಗದಲ್ಲಿ ಯಾರಿಗೆಲ್ಲ ರ‍್ಯಾಕಿಂಗ್?(ಮೊದಲ ಮೂರು ಸ್ಥಾನ)

ಇಂಜಿನಿಯರಿಂಗ್ ವಿಭಾಗ

1. ಭವೇಶ್​ ಜಯಂತಿ - ಬೆಂಗಳೂರಿನ ಮಾರತಹಳ್ಳಿಯ ಚೈತನ್ಯ ಸಿಬಿಎಸ್​ಇ ಶಾಲೆ

2. ಸಾತ್ವಿಕ್​ ಬಿರಾದರ್​- ಬೆಂಗಳೂರಿನ ಚೈತನ್ಯ ಟೆಕ್ನೋ ಸ್ಕೂಲ್, ಕನಕಪುರ ರಸ್ತೆ ಉತ್ತರಹಳ್ಳಿ​

3. ದಿನೇಶ್​ ಗೋಮತಿ ಶಂಕರ್ ಅರುಣಾಚಲಂ ​- ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ, ಬೆಂಗಳೂರು

ಕೃಷಿ ವಿಭಾಗ

1. ಅಕ್ಷಯ್​ ಎಂ- ಆಳ್ವಾಸ್​ ಪಿಯು ಕಾಲೇಜು, ಮೂಡಬಿದ್ರಿ

2. ಸಾಯಿಶ್​ ಶರವಣ ಪಂಡಿತ್- ಎಕ್ಸ್​ಪರ್ಟ್​ ಪಿಯು ಕಾಲೇಜು, ಮಂಗಳೂರು

3. ಸುಚಿತ್​. ಪಿ- ಎಕ್ಸ್​ಪರ್ಟ್​ ಪಿಯು ಕಾಲೇಜು, ಮಂಗಳೂರು

ಕೃಷಿ ವಿಭಾಗ ಪ್ರ್ಯಾಕ್ಟಿಕಲ್​

1. ಕೀರ್ತನ ಎಂ.ಎಲ್​- ಶಾರದಾಂಬ ಕಾಲೇಜು, ತುಮಕೂರು

2. ರಕ್ಷಿತಾ ವಿ.ಪಿ- ಎಚ್​ಎಂಆರ್​ ಪಿಯು ಕಾಲೇಜು ಕಲ್ಯಾಣ್​ನಗರ, ಬೆಂಗಳೂರು

3. ಅಶ್ವಿನಿ ಎಕ್ಕುಂಡಿ- ಎಕ್ಸ್​ಲೆಂಟ್​ ಸೈನ್ಸ್​ ಪಿಯು ಕಾಲೇಜು, ಅಥಣಿ ರಸ್ತೆ, ವಿಜಯಪುರ

ನರ್ಸಿಂಗ್ ವಿಭಾಗ

1. ಹರೀಶ್​ ರಾಜ್​- ಯಲಹಂಕ ನಾರಾಯಣ ಇ-ಟೆಕ್ನೋ ಕಾಲೇಜು

2. ಆತ್ರೇಯ- ಹೆಚ್​ಎಸ್​ಆರ್​ ಲೇಔಟ್​ನ ನ್ಯಾಷನಲ್​ ಪಬ್ಲಿಕ್​ ಸ್ಕೂಲ್

3. ಶಾಪಲ್​ ಶೆಟ್ಟಿ - ಮಂಗಳೂರಿನ ವಳಚ್ಚಿಲ್​ನ ಎಕ್ಸ್​ಪರ್ಟ್​ ಕಾಲೇಜು

ಬಿ ಫಾರ್ಮ್​ ರ್ಯಾಂಕ್​

1. ಆತ್ರೇಯ ವೆಂಕಟಚಲಂ

2. ಭವೇಶ್ ಜಯಂತಿ

3. ಹರೀಶ್ ರಾಜ್​ ಡಿ.ವಿ

ವೆಟರ್ನರಿ ಪ್ರಾಕ್ಟಿಕಲ್​

1. ರಕ್ಷಿತಾ .ವಿ.ಪಿ - ಹೆಚ್​ಎಂ​ಆರ್​ ನ್ಯಾಷನಲ್ ಪಿಯು ಕಾಲೇಜು, ಕಲ್ಯಾಣ್​ನಗರ, ಬೆಂಗಳೂರು​

2. ನಂದನ್​ - ಆರ್​ಕೆ ವಿಷನ್​ ಪಿಯು ಕಾಲೇಜು, ಚಿಂತಾಮಣಿ

3. ಭುವನೇಶ್ವರಿ- ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು, ಲಿಂಗಸೂರು, ರಾಯಚೂರು