ನ್ಯೂಸ್

ಶುಕ್ರವಾರ ಕೆ-ಸಿಇಟಿ ಫಲಿತಾಂಶ ಪ್ರಕಟ

sspmiracle1982

ಬೆಂಗಳೂರು: ತಾಂತ್ರಿಕ ಕಾರಣಗಳಿಂದಾಗಿ‌ ಗುರುವಾರ ಪ್ರಕಟವಾಗಬೇಕಾಗಿದ್ದ ಸಿಇಟಿ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ (ಆಗಸ್ಟ್ 21) ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಅಂದು ಮಧ್ಯಾಹ್ನ 12.30ಕ್ಕೆ ಫಲಿತಾಂಶವನ್ನು ಸಾರ್ವಜನಿಕರಿಗೆ ಲಭ್ಯವಾಗುವ ಹಾಗೆ ಮಾಡಲಿದೆ ಎಂದು ಅವರು ತಿಳಿಸಿದರು. ಈ ಕೆಳಗಿನ‌ ಲಿಂಕ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. http://karresults.nic.in

ಜುಲೈ 30 ಮತ್ತು 31 ರಂದು ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆಗಳ ಮಧ್ಯೆ ಪರೀಕ್ಷೆ ನಡೆಸಲಾಗಿತ್ತು. 

ಫಲಿತಾಂಶ ಪ್ರಕಟಿಸಿದ ಕೂಡಲೆ, ಪರೀಕ್ಷಾ ಪ್ರಾಧಿಕಾರವು ಕಟ್ ಆಫ್ ಪಟ್ಟಿಯನ್ನು ಸಹ ಬಿಡುಗಡೆ ಮಾಡುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ವಿದ್ಯಾರ್ಥಿಯು ಪಡೆಯಬೇಕಾದ ಕನಿಷ್ಠ ಅಂಕಗಳು ಕಟ್ ಆಫ್ ಆಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ, ಹಾಜರಾದ ಅಭ್ಯರ್ಥಿಗಳ ಸಂಖ್ಯೆ, ಸೀಟುಗಳ ಲಭ್ಯತೆ  ಇತ್ಯಾದಿ ಆಧರಿಸಿ ಪ್ರತಿವರ್ಷ ಕಟ್-ಆಫ್​ ಸ್ವರೂಪ ಬದಲಾಗುತ್ತದೆ.