ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆಯಿಂದ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಕೆಸಿ ವ್ಯಾಲಿ 2 ನೇ ಹಂತದ ಯೋಜನೆಯಡಿ ಲಕ್ಷಿ$್ಮಸಾಗರ ಪಂಪ್​ ಹೌಸ್​ನಿಂದ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಡಿ.ಕೆ.ಶಿವಕುಮಾರ್​, ಡಾ.ಎಂ.ಸಿ.ಸುಧಾಕರ್​, ಕೊತ್ತೂರು ಜಿ.ಮಂಜುನಾಥ್​, ಕೆ.ವೈ.ನಂಜೇಗೌಡ ಇದ್ದರು. 
ನ್ಯೂಸ್

ಕೆ.ಸಿ. ವ್ಯಾಲಿ 2ನೇ ಹಂತ ಡಿಸೆಂಬರ್​ಗೆ ಪೂರ್ಣ

ಕೋಲಾರ: ಕೆ.ಸಿ. ವ್ಯಾಲಿ ಯೋಜನೆ 2ನೇ ಹಂತ ಡಿಸೆಂಬರ್​ಗೆ ಪೂರ್ಣಗೊಳ್ಳಲಿದ್ದು, 272 ಕೆರೆಗಳಿಗೆ 2ನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಗುರುವಾರ ಕಾವೇರಿ ನಿವಾಸದಲ್ಲಿ ಕೆ.ಸಿ. ವ್ಯಾಲಿ 2ನೇ ಹಂತದ ಯೋಜನೆಯಡಿ ಲಕ್ಷಿ$್ಮಸಾಗರ ಪಂಪ್​ಹೌಸ್​ನಿಂದ ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ವರ್ಚುವಲ್​ ಆಗಿ ಲೋಕಾರ್ಪಣೆ ಮಾಡಿದರು.

ಈ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನ ಸುತ್ತಮುತ್ತಲಿನ ಬಯಲು ಸೀಮೆಯ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಯೋಜನೆ ಕೈಗೊಳ್ಳಲಾಗಿತ್ತು. ಈಗ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ನೀರಿನ ಅಭಾವದಿಂದ ಬಳಲುತ್ತಿದ್ದ ಜನರ ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸಹ ಸುಧಾರಣೆ ಕಂಡಿದ್ದಾರೆ. ಲಕ್ಷಿ$್ಮಸಾಗರ ಪಂಪ್​ಹೌಸ್​ನಿಂದ ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸಲಾಗುವುದು. ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಈ ನೀರನ್ನು ತುಂಬಿಸಿದ ಕೆರೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ ಎಂದರು.

ಕೆ.ಸಿ. ವ್ಯಾಲಿ 2ನೇ ಹಂತ ಡಿಸೆಂಬರ್​ ಒಳಗೆ ಪೂರ್ಣಗೊಳ್ಳಲಿದ್ದು, 272 ಕೆರೆಗಳನ್ನು ತುಂಬಿಸಲು ಸಾಧ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಸಚಿವ ಎನ್​.ಎಸ್​. ಬೋಸರಾಜು ಮಾತನಾಡಿ, ವ್ಯರ್ಥವಾಗುತ್ತಿದ್ದ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವ ಈ ಯೋಜನೆಯಿಂದ ಈ ಭಾಗದ ರೈತರ ಜೀವನದಲ್ಲಿ ಹೊಸ ಬೆಳಕು ಮೂಡುತ್ತಿದೆ. ಇದೇ ರೀತಿಯಾಗಿ ವೃಷಭಾವತಿ ವ್ಯಾಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಇನ್ನಷ್ಟು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವ ಕಾಮಗಾರಿ ಭರದಿಂದ ಸಾಗಿದೆ ಎಂದರು.

ಪ್ರಸ್ತುತ ಯೋಜನೆಯಲ್ಲಿ 9 ಪಂಪಿಂಗ್​ ಸ್ಟೇಶನ್​ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಕೆ.ಸಿ. ವ್ಯಾಲಿ 2ನೇ ಹಂತದ ಯೋಜನೆಯ ಲಕ್ಷಿ$್ಮಸಾಗರದ 5ನೇ ಪಂಪ್​ಹೌಸ್​ನಿಂದ ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಉಳಿದ ಪಂಪ್​ಹೌಸ್​ಗಳನ್ನು ಡಿಸೆಂಬರ್​ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಎಂ.ಸಿ. ಸುಧಾಕರ್​, ಕೆ.ಎಚ್​. ಮುನಿಯಪ್ಪ ಸೇರಿ ಕೋಲಾರ ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ವಿಶೇಷ ಕಾರ್ಯಕ್ರಮಕ್ಕೆ ಕರೆ

ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸುತ್ತಿರುವ ಹಿನ್ನೆಲೆಯಲ್ಲಿ ಆ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಈ ಯೋಜನೆಯಿಂದ ಆಗುವ ಅನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಥಳಿಯ ಶಾಸಕರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಸಲಹೆ ನೀಡಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್​ ಅಹ್ಮದ್​, ಸಚಿವರಾದ ಕೆ.ಎಚ್​.ಮುನಿಯಪ್ಪ, ಶರಣ ಪಾಟೀಲ್​, ಬೊಸರಾಜು, ಡಾ.ಎಂ.ಸಿ.ಸುಧಾಕರ್​, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿಗಳಾದ ಎಂ.ಎಲ್​.ಅನಿಲ್​ ಕುಮಾರ್​, ಡಿ.ಟಿ.ಶ್ರೀನಿವಾಸ್​ ಇದ್ದರು.

* ಜನರಲ್ಲಿ ಜಾಗೃತಿ ಮೂಡಿಸಿ

ಕೆ.ಸಿ.ವ್ಯಾಲಿ ಯೋಜನೆಯ ಎರಡು ಹಂತ ಕಾಮಗಾರಿ ಪೂರ್ಣಗೊಂಡರೆ ಸುಮಾರು 395 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲಾಗುವುದು. ಜಿಲ್ಲೆಯ ಆಯಾ ತಾಲೂಕುಗಳಲ್ಲಿ ಶಾಸಕರು ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ನಂತರ ಕಾರ್ಯಕ್ರಮ ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸೂಚಿಸಿದರು. ಬಯಲು ಸೀಮೆ ಜಿಲ್ಲೆಗಳ ನೀರಿನ ಸಮಸ್ಯೆ ಗಮನದಲ್ಲಿಟ್ಟುಕೊಂಡು ಸರ್ಕಾರವು ಯೋಜನೆ ಜಾರಿಗೆ ತಂದಿದೆ. ಆಯಾ ಜಿಲ್ಲೆಗಳಲ್ಲಿ ಯೋಜನೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತಿದೆ ಎಂಬುದು ಪರಿಶೀಲನೆ ಮಾಡಬೇಕು. ನೀರನ್ನು ನೇರವಾಗಿ ಬಳಕೆ ಮಾಡದಂತೆ ಅಧಿಕಾರಿಗಳ ಜತೆಗೆ, ಜನಪ್ರತಿನಿಧಿಗಳು ಸಹ ಅರಿವು ಮೂಡಿಸಬೇಕು ಎಂದು ಹೇಳಿದರು.

* ನಿರೀತಮಟ್ಟದಲ್ಲಿ ನೀರು ಪೂರೈಸ್ತಿಲ್ಲ

ಯೋಜನೆಯಿಂದ ಒಟ್ಟು 440 ಎಂಎಲ್​ಡಿ ನೀರನ್ನು ಜಿಲ್ಲೆಗೆ ಪಂಪ್​ ಮಾಡಬೇಕಿತ್ತು, ಆದರೆ ನಿರೀತ ಮಟ್ಟದಲ್ಲಿ ಹರಿಸಲಾಗುತ್ತಿಲ್ಲ ಎಂದು ಶಾಸಕರಾದ ಕೊತ್ತೂರು ಜಿ.ಮಂಜುನಾಥ್​, ಕೆ.ವೈ.ನಂಜೇಗೌಡ, ಎಂಎಲ್ಸಿ ಅನಿಲ್​ ಕುಮಾರ್​ ಅವರು ಸಿಎಂ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಸಮರ್ಪಕವಾಗಿ ನೀರನ್ನು ಸಂಸರಿಸಿ ಸರಬರಾಜು ಮಾಡಿ, ಯೋಜನೆಯ ಉದ್ದೇಶ ಈಡೇರಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

* ಯೋಜನೆಯಿಂದ ಅಡ್ಡ ಪರಿಣಾಮವಿಲ್ಲ

ನಾಲ್ಕೆ$ದು ವರ್ಷಗಳಿಂದ ಯೋಜನೆಯಿಂದ ಹರಿಯುತ್ತಿರುವ ನೀರು ಕೆರೆಗಳಲ್ಲಿ ಶೇಖರಣೆಯಾಗುತ್ತಿರುವುದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಈಗ ಎರಡು ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸಲಾಗುತ್ತಿದ್ದು, ಮೂರನೇ ಹಂತದ ಶುದ್ಧೀಕರಣ ಕುರಿತು ಸರ್ಕಾರದಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರವು ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದು ಸಂತಸ ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್​ ವ್ಯಕ್ತಪಡಿಸಿದರು.

ಲಕ್ಷಿ$್ಮಸಾಗರ ಕೆರೆ ಸಮೀಪ ನೇರ ಪ್ರಸಾರ

ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದ ನೇರ ಪ್ರಸಾರವನ್ನು ತಾಲೂಕಿನ ಲಕ್ಷಿ$್ಮಸಾಗರ ಮೊದಲ ಪಂಪ್​ ಹೌಸ್​ ಬಳಿ ಆಯೋಜನೆ ಮಾಡಲಾಗಿತ್ತು. ಬೆಳ್ಳೂರು ಗ್ರಾಪಂ ಅಧ್ಯೆ ಮಮತಾ, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್​, ಕಾರ್ಯಪಾಲಕ ಇಂಜನಿಯರ್​ ವಿಷ್ಣುಕಾಮತ್​, ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ಶಶಿಕುಮಾರ್​, ಮುಖಂಡ ಸೀಸಂದ್ರ ಗೋಪಾಲ್​, ಮೈಲ್ಲಾಂಡಳ್ಳಿ ಮುರಳಿ ಇದ್ದರು.