ನ್ಯೂಸ್

ಕಡೂರು ಬರಪೀಡಿತ ತಾಲೂಕು

ಕಡೂರು: ತಾಲೂಕಿನಾದ್ಯಂತ ಮುಂಗಾರು ವಿಲವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಿದ್ದಪಡಿಸಿರುವ ಬರಪೀಡಿತ ಪ್ರದೇಶದ ತಾಲೂಕುಗಳ ಪಟ್ಟಿಯಲ್ಲಿ ಕಡೂರು ಸೇರ್ಪಡೆಯಾಗಿದ್ದು, ಶೀಘ್ರದಲ್ಲಿಯೇ ಕಡೂರು ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಹುತೇಕ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಬೆಳೆಯಿಲ್ಲದೆ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಮಳೆ ಪ್ರಮಾಣದ ಆಧರಿಸಿ ಬರಪೀಡಿತ ಪ್ರದೇಶ ಪಟ್ಟಿ ಸಿದ್ದಪಡಿಸಲಾಗಿದ್ದು, ಮೊದಲ ಪಟ್ಟಿಯಲ್ಲಿಯೇ ಕಡೂರು ತಾಲೂಕಿನ ಹೆಸರು ಘೋಷಣೆಯಾಗಲಿದೆ. ಆ.28ರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂಗಳಲ್ಲಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ಪಕ್ಷದಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
ಕಾನೂನು ಬಾಹಿರವಾಗಿ ಯಾರೇ ತಪ್ಪು ಮಾಡಿದರೂ ಅಧಿಕಾರಿಗಳಿಗೆ ಶಿಕ್ಷೆಯಾಗಲಿದೆ. ಎಮ್ಮೆದೊಡ್ಡಿ ಬಳಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿತ ಪ್ರದೇಶದಲ್ಲಿ 70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಕುಟುಂಬಗಳಿಗೆ ಒಕ್ಕಲೆಬ್ಬಿಸುವುದಿಲ್ಲ. ಸಾಗುವಳಿ ಮಾಡಿಕೊಂಡ ಬಂದಿರುವ ಕುಟುಂಬಗಳಿಗೆ ಪ್ರಾಮಾಣಿಕವಾಗಿ ನ್ಯಾಯದೊರಕಿಸಿಕೊಡಲಾಗುವುದು ಎಂದರು.
ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಮುಖಂಡರಾದ ಎಂ.ಎಚ್.ಚಂದ್ರಪ್ಪ, ಡಿ.ಉಮೇಶ್, ಕಂಸಾಗರಶೇಖರಪ್ಪ, ಲೋಕೇಶ್‌ಬಾಬು, ಪ್ರಸನ್ನ, ರೇಣುಕಾರಾಧ್ಯ, ದಾಸಯ್ಯನಗುತ್ತಿ ಚಂದ್ರಪ್ಪ, ಶ್ರೀಕಂಠ ಒಡೆಯರ್, ಕೋಡಿಹಳ್ಳಿ ಸಿದ್ದಪ್ಪ, ಗೋವಿಂದಪ್ಪ, ವಸಂತ್, ಭೋಗಪ್ಪ, ಸಪ್ತಕೋಟಿ ಧನಂಜಯ್, ವಿನಯ್, ಕೆ.ಜಿ.ಶ್ರೀನಿವಾಸ್‌ಮೂರ್ತಿ ಮತ್ತಿತರಿದ್ದರು.