ನ್ಯೂಸ್

ಕಾವೂರು ಅಂಬಿಕಾ ನಗರದಲ್ಲಿ ಬೈಕ್ ಮರಕ್ಕೆ ಡಿಕ್ಕಿ ಸವಾರ ಮೃತ್ಯು

ಮಂಗಳೂರು: ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಢಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಶುಕ್ರವಾರ ಕಾವೂರಿನ ಅಂಬಿಕಾನಗರದ ತಿರುವಿನಲ್ಲಿ ಸಂಭವಿಸಿದೆ.


ತೀರ್ಥಹಳ್ಳಿ ನಿವಾಸಿ ವೀರೇಶ್(23) ಮೃತಪಟ್ಟವರು. ಅವರು ಮುಂಜಾವ 4 ಗಂಟೆಯ ಸುಮಾರಿಗೆ ಕಾವೂರು ಕಡೆಯಿಂದ ಪಂಜಿಮೊಗರಿನಲ್ಲಿರುವ ತನ್ನ ರೂಮ್ ಕಡೆಗೆ ಬೈಕ್‌ನಲ್ಲಿ ಬರುತ್ತಿರುವಾಗ ಹತೋಟಿ ತಪ್ಪಿ ಬೈಕ್ ರಸ್ತೆಯ ಎಡಭಾಗದಲ್ಲಿರುವ ಮಣ್ಣಿನ ರಸ್ತೆಯಲ್ಲಿ ಚಲಿಸಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ವೀರೇಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೀರೇಶ್ ಸೆಲೂನ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.