Kavinder Gupta: ಕೇಂದ್ರಾಡಳಿತ ಪ್ರದೇಶ ಲಡಾಖ್ನ 3ನೇ ಲೆಫ್ಟಿನೆಂಟ್ ಗವರ್ನರ್ ಆಗಿ ಇಂದು (ಜು.18) ಬಿಜೆಪಿಯ ಹಿರಿಯ ನಾಯಕ ಕವಿಂದರ್ ಗುಪ್ತಾ ಪ್ರಮಾಣ ವಚನ ಸ್ವೀಕರಿಸಿದರು.
ಲೇಹ್ನ ರಾಜ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕವಿಂದರ್ ಗುಪ್ತಾಗೆ ಲಡಾಖ್ ಹೈಕೋರ್ಟ್ನ ನ್ಯಾಯಾಮೂರ್ತಿ ಅರುಣ್ ಪಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ನಾಲ್ಕು ದಿನಗಳ ಹಿಂದೆ ಕವಿಂದರ್ ಗುಪ್ತಾರನ್ನು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಿಸಿದ್ದರು.
ಕವಿಂದರ್ ಗುಪ್ತಾ ಜಮ್ಮು-ಕಾಶ್ಮೀರದ ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ. 2018ರಲ್ಲಿ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 51 ದಿನಗಳ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಫ್ತಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂಪಡೆದ ಬಳಿಕ ಆ ಹುದ್ದೆಯನ್ನು ತೊರೆದಿದ್ದರು,(ಏಜೆನ್ಸೀಸ್).