ಬೈಲಕುಪ್ಪೆ. ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿ.ಎಂ. ರಸ್ತೆ ಸಮೀಪದಲ್ಲಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಿ ಮಾತೆಗೆ 129ನೇ ಹುಣ್ಣಿಮೆ ವಿಶೇಷ ಪೂಜೆಯನ್ನು ಬುಧವಾರ ಸಂಜೆ ನೆರವೇರಿಸಲಾಯಿತು.
ಸಂಘದ ಅಧ್ಯಕ್ಷ ಬೇಬೀಂದ್ರ ಪ್ರಸಾದ್ ಸಮ್ಮುಖ ಅರ್ಚಕ ಪುರುಷೋತ್ತಮ ಭಟ್ ಕಾವೇರಿ ಮಾತೆ ಪ್ರತಿಮೆಗೆ ಜೇನುತುಪ್ಪ, ಎಳನೀರಿನ ಅಭಿಷೇಕ ಮಾಡಿದರು. ಮಾತೆಗೆ ಹೊಸ ಸೀರೆ, ಕುಪ್ಪಸ, ಒಡವೆ ಸಮರ್ಪಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಲಾಯಿತು.
ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಭಕ್ತರಾದ ವಸಂತ ದಂಪತಿ, ಶಾಲಿನಿ ರುದ್ರೇಶ್, ಸಂಘದ ಸದಸ್ಯರಾದ ವಿಜೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಚಂದ್ರು, ರುದ್ರೇಶ್, ಅವರ್ತಿ ಮಂಜು, ಸೋಮಶೇಖರ್ ಇತರರು ಹಾಜರಿದ್ದರು.