ನ್ಯೂಸ್

ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರವೇ ಪ್ರತಿಭಟನೆ

ಹಾವೇರಿ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ನ್ಯಾಯಾಲಯಕ್ಕೆ ಸೂಕ್ತ ರೀತಿಯಲ್ಲಿ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಮುಖರಾದ ನೂರಅಹ್ಮದ ಲಕ್ಷೇಶ್ವರ, ಮಾದೇವಪ್ಪ ಹಡಿಗೊಂಡ, ಫಕ್ಕೀರೇಶ ಕಟ್ಟಿಮನಿ, ನಿಂಗಪ್ಪ ಬೆಂಚಿಹಳ್ಳಿ, ಅನ್ನಪೂರ್ಣ ವಡ್ಡಟ್ಟಿ, ಅನುಸೂಯಾ ಸಿದ್ಧಪ್ಪಳವರ, ಎಂ.ಆರ್. ನದಾಫ, ಜಾವೀದ ದೇವಿಹೊಸುರ, ಬಸವರಾಜ ಜೆ.ಎನ್., ಹೊನ್ನಪ್ಪ ಲಿಂಗಹದಳ್ಳಿ, ರೇಣುಕಾ ಬಡಕಣ್ಣನವರ ಮತ್ತಿತರರಿದ್ದರು.