ಸಿರಗುಪ್ಪದ ಪತಂಗೆ ಆರ್ಕೇಡ್ ಸಭಾಂಗಣದಲ್ಲಿ ಉಪನೋಂದಣಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕಾವೇರಿ 2.0 ತಂತ್ರಾಂಶದ ಬಗೆಗಿನ ಒಂದ ದಿನದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಂ ಉದ್ಘಾಟಿಸಿದರು. ಉಪನೋಂದಣಾಧಿಕಾರಿ ಯಲ್ಲರೆಡ್ಡಪ್ಪ, ಪ್ರಥಮ ದರ್ಜೆಸಹಾಯಕ ಲಕ್ಷ್ಮೀನಾರಾಯಣ, ದ್ವಿ.ದ.ಸಹಾಯಕ ರಮೇಶ, ತರಬೇತುದಾರ ಮಹೇಶ ಸಿಬ್ಬಂದಿ ಹನುಮೇಶ, ಕೃಷ್ಣ ಇತರರು ಇದ್ದರು. 
ನ್ಯೂಸ್

ಕಾವೇರಿ ತಂತ್ರಾಂಶ 2.0 ನೋಂದಣಿ ಮಾಹಿತಿ ಅಗತ್ಯ

ರುದ್ರಪ್ಪ ವಾಲಿ

ಸಿರಗುಪ್ಪ: ಆಸ್ತಿ ನೋಂದಣಿ ವಿಷಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ತಂತ್ರಜ್ಞಾನ ಮುಂದುವರಿದಂತೆಲ್ಲಾ ಸರ್ಕಾರ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ಮಾಬುನ್ನಿಸಾ ಬೇಗಂ ಹೇಳಿದರು.

ಕಾವೇರಿ 2.0 ತಂತ್ರಾಂಶದ ಬಗ್ಗೆ ವಕೀಲರು, ಪತ್ರಬರಹಗಾರರು, ಬ್ಯಾಂಕ್ ಅಧಿಕಾರಿಗಳಿಗಾಗಿ ಉಪನೋಂದಣಿ ಇಲಾಖೆ ನಗರದ ಪತಂಗೆ ಆರ್ಕೆಡ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸೂಕ್ತ ಶುಲ್ಕ ನಿಗದಿ

ಈ ಹಿಂದೆ ನೋಂದಣಿ ವಿಚಾರದಲ್ಲಿ ಕೈಬರಹದ ಮೂಲಕ ಆಸ್ತಿಗಳನ್ನು ನೋಂದಣಿ ಮಾಡಲಾಗುತ್ತಿತ್ತು. ನಂತರ ಕಾವೇರಿ 2.1 ಅಭಿವೃದ್ಧಿಗೊಂಡಿದ್ದರಿಂದ ಗಣಕ ಯಂತ್ರದ ಮೂಲಕ ನೋಂದಣಿ ಮಾಡಲಾಗುತ್ತಿತ್ತು. ತಂತ್ರಜ್ಞಾನವು ಇನ್ನೂ ಮುಂದುವರಿದು ಕಾವೇರಿ 2.0 ಮೂಲಕ ನೋಂದಣಿ ಮಾಡಲಾಗುತ್ತಿದೆ. ಈ ತಂತ್ರಾಂಶದ ಬಗ್ಗೆ ಪತ್ರಬರಹಗಾರರು, ವಕೀಲರು, ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಮಾಹಿತಿಯನ್ನು ತಿಳಿದುಕೊಂಡು ನಂತರ ಗಣಕಯಂತ್ರದಲ್ಲಿ ಅಂತರ್ಜಾಲದ ಮೂಲಕ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

ಖರೀದಿದಾರರು, ಮಾರಾಟಗಾರರು ಹಾಗೂ ನೋಂದಾಯಿಸಿದ ಆಸ್ತಿಯ ದಾಖಲೆಗಳನ್ನು ನೋಂದಣಿ ಮಾಡಿಕೊಂಡು ನಂತರ ಸಂಬಂಧಿಸಿದ ದಾಖಲೆಗಳನ್ನು ನೋಂದಣಿ ಕಚೇರಿಗೆ ತಲುಪಿಸಬೇಕು. ನೋಂದಣಾಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಶುಲ್ಕ ನಿಗದಿ ಪಡಿಸಿ ನೋಂದಣಿ ಮಾಡಿಕೊಳ್ಳುವರು ಎಂದು ಮಾಹಿತಿ ನೀಡಿದರು.

ಪ್ರಥಮ ದರ್ಜೆಸಹಾಯಕ ಲಕ್ಷ್ಮೀನಾರಾಯಣ, ದ್ವಿ.ದ.ಸಹಾಯಕ ರಮೇಶ, ತರಬೇತುದಾರ ಮಹೇಶ. ನೋಂದಣಿ ಇಲಾಖೆಯ ಸಿಬ್ಬಂದಿ, ವಕೀಲರು, ಪತ್ರಬರಹಗಾರರು, ಬ್ಯಾಂಕ್‌ಅಧಿಕಾರಿಗಳು ಇದ್ದರು.