ನ್ಯೂಸ್

ಸಂಕಷ್ಟ ಹಂಚಿಕೆ ಸೂತ್ರ ಅನಿವಾರ್ಯ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಸಂಕಷ್ಟ ಪರಿಸ್ಥಿತಿಯಲ್ಲಿ ನೀರಿನ‌ ಹಂಚಿಕೆ ಸೂತ್ರ ರೂಪಿಸದೇ ಇರುವುದರಿಂದ ಕಾವೇರಿ ವಿಚಾರ ರಾಜ್ಯವನ್ನು ತೀವ್ರ ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ರಚಿಸಿದ‌ ನಂತರ ಕೇಂದ್ರ ಅಥವಾ ಸಿ.ಡಬ್ಲ್ಯೂಎಂಎ ಬರ ಪರಿಸ್ಥಿತಿಯಲ್ಲಿ, ಜಲಾಶಯಗಳಲ್ಲಿ ನೀರಿನ‌ ಲಭ್ಯತೆ ಕೊರತೆ ಇರುವ ಸಂದರ್ಭದಲ್ಲಿ ಯಾವ ಮಾನ ದಂಡಗಳನ್ನು ಅನುಸರಿಸಬೇಕು‌ ಎಂಬ ಸೂತ್ರವೇ ಸಿದ್ಪಧಡಿಸಿಲ್ಲ ಹಾಗಾಗಿ‌ ಕರ್ನಾಟಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬರ ಆವರಿಸಿದೆ. 195 ಜಿಲೆಗಳಲ್ಲಿ ಬರ ಘೋಷಣೆ ಮಾಡಲಾಗಿದ್ದು ಪರಿಹಾರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲಾಗುತ್ತಿದೆ. ರಾಜ್ಯ ಸರ್ಕಾರ ರೈತರ ಹಿತ ಕಾಯಲು ‌ಸದಾ ಬದ್ದವಾಗಿದೆ ಎಂದರು.