ಮುಂಬೈ: ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. 7 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿಯು ಅಧಿಕೃತವಾಗಿ ಜೂನ್ 23ರಂದು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸೋನಾಕ್ಷಿ ಮದುವೆಯಲ್ಲಿ ಆಕೆಯ ತಾಯಿ ಪೂನಂ ಸಿನ್ಹಾ ಮತ್ತು ತಂದೆ ಶತ್ರುಘ್ನ ಸಿನ್ಹಾ ಕಾಣಿಸಿಕೊಂಡಿದ್ದರು. ಆದರೆ ನಟಿಯ ಸಹೋದರರಾದ ಲವ್ ಸಿನ್ಹಾ ಮದುವೆಯಲ್ಲಿ ಭಾಗಿಯಾಗಿರಲಿಲ್ಲ.
ಮದುವೆ ಬಳಿಕ ಬಾಲಿವುಡ್ ಹಾಗೂ ರಾಜಕೀಯ ನಾಯಕರಿಗಾಗಿ ವಿಶೇಷ ಔತಣಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಸೋನಾಕ್ಷಿಯ ಮದುವೆಯಲ್ಲಿ ಸಹೋದರರಾದ ಲವ್ ಸಿನ್ಹಾ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಅವರು ನಾವು ಕೆಲವರೊಂದಿಗೆ ಬೆರೆಯುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಹೋದರಿ ಅನ್ಯಧರ್ಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದರ ಕುರಿತು ಕಿಡಿಕಾರಿದ್ದರು. ಇದೀಗ ಈ ಕುರಿತು ಮಾತನಾಡಿರುವ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ನಾನು ಕೊನೆಯವರೆಗೂ ಉಳಿದುಕೊಂಡಿದ್ದರೆ…; ಜಿಂಬಾಬ್ವೆ ವಿರುದ್ಧ ಸೋಲಿನ ಕುರಿತು ನಾಯಕ ಶುಭಮನ್ ಹೇಳಿದ್ದಿಷ್ಟು
ಈ ಕುರಿತು ಮಾತನಾಡಿದ ಶತ್ರುಘ್ನ ಸಿನ್ಹಾ, ದೊಡ್ಡ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸುವವರಿಗೆ ಇದೇನು ದೊಡ್ಡ ವಿಚಾರವಲ್ಲ. ಇಲ್ಲಿ ಚಿಂತಿಸಬೇಕಾದ ವಿಚಾರವೇನು ಇಲ್ಲ. ಸಾಮಾನ್ಯ ಕುಟುಂಬದಲ್ಲಿ ನಡೆಯುವ ಮದುವೆ ರೀತಿ ನಮ್ಮಲ್ಲೂ ನಡೆದಿದೆ. ನಾವು ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕೆ ಸುದ್ದಿಯಾಗುತ್ತಿದ್ದೇವೆ ಎಂಬುದು ನಮಗಿಂತ ಹೆಚ್ಚಾಗಿ ನಿಮಗೆ ಗೊತ್ತು. ಅಂತರ್ಧರ್ಮೀಯ ವಿವಾಹ ಆಗಿರುವುದು ಇದೇ ಮೊದಲಲ್ಲ.
ನಮ್ಮ ಕುಟುಂಬ ಅತ್ಯಂತ ಕೆಟ್ಟ ಸ್ಮೀಯರ್ ಅಭಿಯಾನಕ್ಕೆ ಒಳಪಟ್ಟಿದ್ದೇನೆ, ನನ್ನ ಕುಟುಂಬದ ಮೇಲೆ ದಾಳಿ ಮಾಡುವುದನ್ನು ನಾನು ಸಹಿಸುವುದಿಲ್ಲ. ಕೌಟುಂಬಿಕಿ ವಿಚಾರಗಳು ಕುಟುಂಬದೊಳಗೆ ಇದ್ದರೆ ಚೆಂದ. ಯಾವ ಕುಟುಂಬದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ತೋರಿಸಿ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯವಿದ್ದರು ಅಂತಿಮವಾಗಿ ನಾವು ಒಂದು ಕುಟುಂಬವಷ್ಟೇ. ಎಲ್ಲರ ಮನೆಯಲ್ಲೂ ಇದ್ದ ಹಾಗೆ ನಮ್ಮಲ್ಲೂ ನಡೆಯುತ್ತಿದೆ ಎಂದು ನಟಿ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.