ಮುಂಬೈ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವನ್ನು ಒಂದು ಹಬ್ಬದಂತೆ ಆಚರಿಸಲಾಗುತ್ತಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ದೇಶದ ಮೂಲೆಮೂಲೆಯಿಂದ ಮತ್ತು ವಿದೇಶಗಳಿಂದ ಜನರು ಬರುತ್ತಿದ್ದಾರೆ. ಬಣ್ಣದ ಜಗತ್ತಿನ ಸೆಲಿಬ್ರಿಟಿಗಳು ಕೂಡ ಮಹಾಕುಂಭಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಾಲಿಗೆ ಇದೀಗ ನಟಿ ಕತ್ರಿನಾ ಕೈಫ್(Katrina Kaif) ಕೂಡ ಸೇರುತ್ತಾರೆ.
ಇದನ್ನು ಓದಿ: ಟ್ರೋಲ್ ಮಾಡುವವರಿಗೆ ಹೆದರುವುದಿಲ್ಲ.. ನನ್ನದೊಂದು ಟ್ರಿಕ್ ಇದೆ; ಹೃತಿಕ್ ರೋಷನ್ ಗೆಳತಿ ತಿಳಿಸಿದ್ದೇನು? | Saba Azad
ಹೌದು ನಟಿ ಕತ್ರಿನಾ ಕೈಫ್ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಪ್ರಯಾಗ್ ರಾಜ್ ತಲುಪಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಾಕುಂಭಮೇಳದಲ್ಲಿ ನಟಿ ಕತ್ರಿನಾ ಕೈಫ್ ಪರಮಾರ್ಥ ನಿಕೇತನ ಶಿಬಿರದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಈ ಬಾರಿ ಇಲ್ಲಿಗೆ ಬರಲು ಸಾಧ್ಯವಾಗಿದ್ದು ನನ್ನ ಅದೃಷ್ಟ ಎಂದು ಹೇಳಿದರು. ನಾನು ನಿಜಕ್ಕೂ ತುಂಬಾ ಸಂತೋಷ ಮತ್ತು ಕೃತಜ್ಞಳಾಗಿದ್ದೇನೆ. ನಾನು ಸ್ವಾಮಿ ಚಿದಾನಂದ ಸರಸ್ವತಿ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದುಕೊಂಡೆ. ನಾನು ನನ್ನ ಅನುಭವವನ್ನು ಇಲ್ಲಿಂದ ಪ್ರಾರಂಭಿಸುತ್ತಿದ್ದೇನೆ. ನನಗೆ ಇಲ್ಲಿನ ಶಕ್ತಿ, ಎಲ್ಲದರ ಸೌಂದರ್ಯ ಮತ್ತು ಮಹತ್ವ ತುಂಬಾ ಇಷ್ಟ. ನಾನು ಇಡೀ ದಿನ ಇಲ್ಲಿ ಕಳೆಯಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು.
ಕತ್ರಿನಾ ಕೈಫ್ ಈ ಹಿಂದೆಯೂ ತನ್ನ ಅತ್ತೆಯೊಂದಿಗೆ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ನಂತರ ಅವರನ್ನು ಮುಸ್ಲಿಂ ಆಗಿದ್ದರೂ ಹಿಂದೂ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಟ್ರೋಲ್ ಮಾಡಲಾಯಿತು.
ಮಹಾಕುಂಭಮೇಳವು ಜನವರಿ 13, 2025ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಹಲವಾರು ಭಕ್ತರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮಕ್ಕೆ ಆಧ್ಯಾತ್ಮಿಕ ಶುದ್ಧೀಕರಣ ಮತ್ತು 'ಮೋಕ್ಷ'ವನ್ನು ಪಡೆಯಲು ಪವಿತ್ರ ಸ್ನಾನ ಮಾಡಲು ಸೇರಿದ್ದಾರೆ.(ಏಜೆನ್ಸೀಸ್)