ಕಟೀಲು ಪ್ರತಿಷ್ಠಾನದ ಕಟೀಲು ಕಲಾ ಉತ್ಸವದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ, ವೇದವ್ಯಾಸ ತಂತ್ರಿ ಶಿಬರೂರು, ವಾಸುದೇವ ಆಸ್ರಣ್ಣ ಮೊದಲಾದವರಿದ್ದರು. 
ನ್ಯೂಸ್

ಕಲೆಯಿಂದ ಮನುಷ್ಯನಿಗೆ ನೆಮ್ಮದಿ

ಪ್ರಮುಖ ಮುಖ್ಯಾಂಶಗಳು

  • ಕಟೀಲು ಕಲಾ ಉತ್ಸವ
  • ಕುಟುಂಬ ಭಜನೆ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾರ್ಕಳ ಪ್ರಥಮ
ವಿಜಯವಾಣಿ ಸುದ್ದಿಜಾಲ ಕಟೀಲು
ಉತ್ತಮ ಕಲಾವಿದರ ನಾಟ್ಯ ಸಂಗೀತ ಪ್ರದರ್ಶನಗಳನ್ನು ನೋಡುವ ಒಳ್ಳೆಯ ಪ್ರೇಕ್ಷಕರು ಹೆಚ್ಚಾಗಬೇಕು. ಕಲೆಯ ಆಸಕ್ತಿ ಇರುವ ಮನುಷ್ಯ ನೆಮ್ಮದಿ, ಆತ್ಮ ಸಂತೋಷ ಅನುಭವಿಸಬಲ್ಲರು ಎಂದು ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು.
ಕಟೀಲು ಪ್ರತಿಷ್ಠಾನದ ಕಟೀಲು ಕಲಾ ಉತ್ಸವದಲ್ಲಿ ಮಾತನಾಡಿದರು.
ವೇದವ್ಯಾಸ ತಂತ್ರಿ ಶಿಬರೂರು, ಕಟೀಲು ದೇಗುಲ ಅರ್ಚಕರಾದ ವಾಸುದೇವ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಮಿಜಾರು ರಾಜೇಶ್ ಶೆಟ್ಟಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪೂನಾದ ಬಂಟರ ಸಂಘದ ರೋಹಿತ್ ಶೆಟ್ಟಿ, ಐಕಳ ಆನಂದ ಶೆಟ್ಟಿ, ಉದಯಕುಮಾರ ಮಡಂತ್ಯಾರು, ಹರೀಶ್ ಶೆಟ್ಟಿ, ನಿಶಾನ್ ಉಳ್ಳಾಲ್, ಗಿರೀಶ್ ಶೆಟ್ಟಿ ತೆಳ್ಳಾರು, ನ್ಯೂರೋ ಸರ್ಜನ್ ಡಾ.ವೆಂಕಟ್ರಮಣ, ಟ್ರಸ್ಟಿ ಸಿ.ಎ.ಸುದೇಶ್ ರೈ, ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರಾದ ಸುಬ್ರಹ್ಮಣ್ಯ ಪ್ರಸಾದ್ ಕೋರಿಯಾರ್, ರತ್ನಾಕರ ಶೆಟ್ಟಿ ಎಕ್ಕಾರು, ಗಿರೀಶ್ ಶೆಟ್ಟಿ ಕಟೀಲು, ಶಿಬರೂರು ಮಧುಕರ ಅಮೀನ್, ದೊಡ್ಡಯ್ಯ ಮೂಲ್ಯ, ಲೋಕಯ್ಯ ಸಾಲ್ಯಾನ್ ಮತ್ತಿತರರು ಇದ್ದರು. ಪ್ರತಿಷ್ಠಾನ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಸಂಗೀತ, ನೃತ್ಯ, ಹಾರ್ಮೋನಿಯಂ ಶಿಕ್ಷಕರಾದ ಅರುಣಾ ರಾವ್, ವಾಸು ಮಾಸ್ಟರ್, ಶ್ರಾವ್ಯ ಅವರನ್ನು ಗೌರವಿಸಲಾಯಿತು.
ಕಲಿಕೆಯಲ್ಲಿ ಸಾಧನೆ ಮಾಡಿದ ಪ್ರತಿಷ್ಠಾನದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಭರತನಾಟ್ಯ, ಶಾಸ್ತ್ರೀಯ ಸಂಗೀತ ಪರೀಕ್ಷೆ ವಿಜೇತರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಭಜನಾ ಸ್ಪರ್ಧೆ ವಿಜೇತರು
ಕುಟುಂಬ ಭಜನೆ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾರ್ಕಳ ಪ್ರಥಮ, ಕಟೀಲು ಸಹೋದರಿಯರು ದ್ವಿತೀಯ , ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ತೃತೀಯ, 16 ವರ್ಷಕ್ಕಿಂತ ಕೆಳಗಿನವರ ವಿಭಾಗದಲ್ಲಿ ಮಲ್ಪೆ ಶ್ರೀ ರಾಮ ಭಜನಾ ಮಂಡಳಿ ಪ್ರಥಮ, ಸ್ವರಾಂಜಲಿ ಸುರತ್ಕಲ್ ದ್ವಿತೀಯ, ಸುಳ್ಯ ವೀರಾಂಜನೇಯ ಭಜನಾ ಮಂಡಳಿ ತೃತೀಯ, 16 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಸ್ವರ ಸಾಗರ ಕೃಷ್ಣಾಪುರ ಸುರತ್ಕಲ್ ಪ್ರಥಮ, ಸ್ವರಾಂಜಲಿ ಸುರತ್ಕಲ್ ದ್ವಿತೀಯ, ಸಸಿಹಿತ್ಲು ಲಕ್ಷ್ಮೀನಾರಾಯಣ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದರು.