ನ್ಯೂಸ್

ಸಾಮಾಜಿಕ ಲೆಕ್ಕಪರಿಶೋಧನೆ ಅವಶ್ಯ; ದಿಂಗಾಲೇಶ ಅಂಗೂರ

ರಾಣೆಬೆನ್ನೂರ: ನರೇಗಾ ಯೋಜನೆಗೆ ಪಾರದರ್ಶಕವಾಗಿ ಅನುಷ್ಠಾನ ಮಾಡಲು ಸಾಮಾಜಿಕ ಲೆಕ್ಕಪರಿಶೋಧನೆ ಅತ್ಯವಶ್ಯ ಎಂದು ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ ಹೇಳಿದರು.

ತಾಲೂಕಿನ ಕರೂರು ಗ್ರಾಪಂನಲ್ಲಿ ಗುರುವಾರ ಏರ್ಪಡಿಸಿದ್ದ ನರೇಗಾ ಕ್ರಿಯಾಯೋಜನೆ ತಯಾರಿಸುವ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಕಾಮಗಾರಿ ಅನುಷ್ಠಾನ ಹಂತದಲ್ಲಿ ನೂನ್ಯತೆಗಳು ಕಂಡುಬಂದರೆ ತಕ್ಷಣ ಮುಂದಿನ ದಿನಗಳಲ್ಲಿ ಸರಿ ಪಡಿಸಿಕೊಳ್ಳುವ ಜವಾಬ್ದಾರಿ ಅನುಷ್ಠಾನ ಮಾಡುವ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನೆ ನರೇಗಾ ಅನುಷ್ಠಾನಕ್ಕೆ ಪಾರದರ್ಶಕತೆ ಕೈಗನ್ನಡಿಯಾಗಿದೆ ಎಂದರು.

ಪಿಡಿಒ ಅಶೋಕ ಪೂಜಾರ ಮಾತನಾಡಿ, ಕೂಲಿ ಕಾಮಿರ್ಕರು ಕೂಲಿ ಕೆಲಸ ಮಾಡುವ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಬೇಕು. ವೈಯಕ್ತಿಕ ಕಾಮಗಾರಿಗಳನ್ನು ರೈತರ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದರು.

ಗ್ರಾಮ ಸಭೆಯ ನೋಡಲ್​ ಅಧಿಕಾರಿ ಡಾ. ರಾವೇಂದ್ರ ಕರೂರು, ಗ್ರಾಪಂ ಅಧ್ಯೆ ಲಲಿತಮ್ಮ ಹಿರೇಬಿದರಿ, ಉಪಾಧ್ಯೆ ನೀಲಮ್ಮ ಪೂಜಾರ, ಸದಸ್ಯರಾದ ವಾಣಿ ಲೆಕ್ಕಿಕೋಣೆ, ಮಂಜಪ್ಪ ಎಚ್​., ಹೊನ್ನಪ್ಪ ಎಂ., ಸಾಮಾಜಿಕ ಪರಿಶೋಧನಾ ತಾಲೂಕು ಸಂಯೋಜಕ ಮಹೇಶ ಪಾಣಿಬಾತಿ, ತಾಂತ್ರಿಕ ಸಹಾಯಕಿ ರೇಷ್ಮಾ ಮತ್ತಿತರರು ಇದ್ದರು.