ಪೆಂಕಾಕ್ ಸಿಲತ್ನಲ್ಲಿ ಕರ್ನಾಟಕಕ್ಕೆ 5 ಚಿನ್ನ, 2 ಬೆಳ್ಳಿ, 12 ಕಂಚಿನ ಪದಕ
ಬೆಂಗಳೂರು: ಪುದುಚೇರಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ವಲಯ ಪೆಂಕಾಕ್ ಸಿಲತ್ (Pencak Silat) ಟೂರ್ನಿಯಲ್ಲಿ ಕರ್ನಾಟಕ ತಂಡ 5 ಚಿನ್ನ, 3 ಬೆಳ್ಳಿ, 12 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ರಾಜ್ಯ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ.
ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆಯ ಕಾರ್ಯದರ್ಶಿ ವಿಜಯ್ಕುಮಾರ್ ಹಂಚಿನಾಳ್, ಖಜಾಂಚಿ ರಾಜಕ್ ಟೈಲರ್, ತರಬೇತುದಾರರಾದ ಜಯಂತ್, ಜೋಸೆಫ್ ವೇದಕುಮಾರ್, ಗುರುರಾಜ್, ವ್ಯವಸ್ಥಾಪಕರಾದ ರವಿ ಎಂ.ಬಿ, ಪುಷ್ಪಾ ಬಿ.ಆರ್, ದೀಪಿಕಾ ಅವರು ತಂಡದೊಂದಿಗೆ ಉಪಸ್ಥಿತರಿದ್ದು, ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ.