ಮದ್ದೂರಿನ ಎಂ.ಎಚ್.ಚನ್ನೇಗೌಡ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಘದ ಉದ್ಘಾಟನೆ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ಉದ್ಘಾಟಿಸಿದರು. ಕೋಕಿಲಾ ಅರುಣ್, ಎಚ್.ಎಲ್.ಸತೀಶ್, ಸಿ.ಅಪೂರ್ವಚಂದ್ರ, ಎಂ.ಆರ್.ಚಕ್ರಪಾಣಿ ಇದ್ದರು. 
ನ್ಯೂಸ್

ಸಾಂಸ್ಕೃತಿಕ ಚಟುವಟಿಕೆಗೆ ಕರ್ನಾಟಕ ಸಂಘ ಉತ್ತಮ ವೇದಿಕೆ

ಮದ್ದೂರು: ಕನ್ನಡ ಭಾಷೆಯ ಬೆಳವಣಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಶಾಲೆ ಕಾಲೇಜಿನಲ್ಲಿರುವ ಕರ್ನಾಟಕ ಸಂಘ ಉತ್ತಮ ವೇದಿಕೆಯಾಗಿದೆ ಎಂದು ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ತಿಳಿಸಿದರು.

ಪಟ್ಟಣದ ಎಂ.ಎಚ್.ಚನ್ನೇಗೌಡ ವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಸಂಘದ ಉದ್ಘಾಟನೆ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷಾ ಚಳವಳಿ ಸಂದರ್ಭದಲ್ಲಿ ಕನ್ನಡದ ಬೆಳೆವಣಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಒತ್ತು ನೀಡುವ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ಕರ್ನಾಟಕ ಸಂಘ ಆರಂಭಿಸಲಾಯಿತು ಎಂದು ಸಂಘದ ಇತಿಹಾಸ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕರ್ನಾಟಕ ಸಂಘದ ಸಕ್ರಿಯ ಚಟುವಟಿಕೆ ಮಕ್ಕಳ ಪ್ರತಿಭೆಯನ್ನ ಹೊರತೆಗೆಯುವಲ್ಲಿ ಶ್ರಮಿಸಲಿ ಎಂದರು. ಪುರಸಭೆ ಅಧ್ಯಕ್ಷೆ ಕೊಕಿಲಾ ಅರುಣ್ ಮಾತನಾಡಿ, ಸಮವಸ್ತ್ರ ಶಾಲೆಯ ಸಂಕೇತವಾಗಿ ಅಷ್ಟೇ ಅಲ್ಲದೆ ಸಮಾನತೆಯ ಪ್ರತಿಬಿಂಬವು ಹೌದು ಎಂದ ಅವರು ವಿಧ್ಯಾರ್ಥಿಗಳು ಪರಸ್ಪರ ಗೌರವಿಸಿ ಸಮಾನತೆಯಿಂದ ಕಾಣುವ ಗುಣ ಬೆಳೆಸಿಕ್ಕೊಳ್ಳಬೇಕೆಂದರು.

ಎಂ.ಎಚ್.ಚನ್ನೇಗೌಡ ವಿದ್ಯಾಲಯದ ಕಾರ್ಯದರ್ಶಿ ಅಪೂರ್ವಾ ಚಂದ್ರು ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಕ್ರೀಡೆ ಕಲೆ ಸಾಹಿತ್ಯ ಚಟುವಟಿಕೆಗೆ ನಮ್ಮ ಸಂಸ್ಥೆ ಹಿಂದಿನಿಂದಲೂ ಆದ್ಯತೆ ನೀಡುತ್ತಾ ಬರುತ್ತಿದ್ದು ಅದನ್ನ ಮುಂದುವರಿಸಿಕೊಂಡು ಹೊಗಲಾಗುವುದು ಎಂದರು.

ರಾಣಿ ಐಶ್ವರ್ಯಾ ಬಿಲ್ಡರ್ಸ್ ಮತ್ತು ಟೌನ್ ಶಿಪ್ ಡೆವಲಪರ್ಸ್‌ನ ಎಚ್.ಎಲ್.ಸತೀಶ್ ಮಾತನಾಡಿ, ಕರ್ನಾಟಕ ಸಂಘದ ಚಟುವಟಿಕೆ ಕ್ರೀಯಾಶೀಲಾಗೊಳ್ಳಲಿ ಎಂದು ಶುಭ ಹಾರೈಸಿದರು. ಅಲ್ಲದೆ ಶಾಲೆಯ ಅಭಿವೃದ್ಧಿಗಾಗಿ 50 ಸಾವಿರ ರೂ. ದೇಣಿಗೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಟಿ.ಅರ್.ಪ್ರಸನ್ನಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಚಕ್ರಪಾಣಿ, ಉಪಾಧ್ಯಕ್ಷ ಸಿ.ಹರೀಶ್, ಮಾಜಿ ಅಧ್ಯಕ್ಷ ಎಸ್.ಪುಟ್ಟಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ಶಿವರಾಜ್, ಮುಖಂಡರಾದ ಉಮೇಶ್, ಶಿವಣ್ಣಗೌಡ, ಮುಖ್ಯಶಿಕ್ಷಕರಾದ ಕೃಷ್ಣ, ಚಂದ್ರಶೇಖರ್ ಇದ್ದರು.