ನ್ಯೂಸ್

14 ದಿನ ಲಾಕ್​ಡೌನ್​ಗೆ ಮಾರ್ಗಸೂಚಿ ಬಿಡುಗಡೆ; ಏನಿರತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್​ ಮಾಹಿತಿ

Mandara

ಬೆಂಗಳೂರು: ನಾಳೆ ರಾತ್ರಿ 9 ಗಂಟೆಯಿಂದ 14 ದಿನಗಳ ಲಾಕ್​ಡೌನ್​ ಅನ್ನು ರಾಜ್ಯದಲ್ಲಿ ಘೋಷಿಸಲಾಗಿದೆ. ಈ ಸಮಯದಲ್ಲಿ ಏನಿರುತ್ತೆ? ಏನಿರಲ್ಲ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಲಾಕ್​ಡೌನ್​ ಮಾರ್ಗಸೂಚಿಯ ಪ್ರಕಾರ, ರಾಜ್ಯದಲ್ಲಿ 14 ದಿನಗಳ ಕಾಲ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿ ಯಾವುದೇ ಬಸ್​ ಸೌಲಭ್ಯ ಲಭ್ಯವಿರುವುದಿಲ್ಲ. ಮೆಟ್ರೋ ರೈಲು ಸೇವೆಯನ್ನೂ ಸ್ಥಗಿತಗೊಳಿಸಲಾಗುವುದು. ಆಟೋ, ಕ್ಯಾಬ್​, ಖಾಸಗಿ ವಾಹನಗಳ ಸಂಚಾರಕ್ಕೂ ನಿರ್ಬಂಧವಿರಲಿದೆ. ತುರ್ತು ಸೇವೆಗೆ ಆಟೋ ಬಳಸಿಕೊಳ್ಳುವಂತೆ ತಿಳಿಸಲಾಗಿದೆ. ಉಳಿದಂತೆ ರೈಲುಗಳು ಮತ್ತು ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅವುಗಳ ಟಿಕೆಟ್​ಗಳನ್ನು ಜನರು ಸಂಚಾರಕ್ಕೆ ಪಾಸ್​ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.

ಶಾಲಾ, ಕಾಲೇಜುಗಳು ಮುಚ್ಚಿರಲಿವೆ. ಆನ್​ಲೈನ್​ ತರಗತಿ ನಡೆಸಲು ಅನುಮತಿಯಿದೆ. ಹೋಟೆಲ್​, ರೆಸ್ಟೋರೆಂಟ್​, ಬಾರ್, ಎಂಆರ್​ಪಿಗಳಲ್ಲಿ ಪಾರ್ಸಲ್​ ಗೆ ಮಾತ್ರ ಅವಕಾಶವಿದೆ. ಸಿನಿಮಾ ಹಾಲ್​, ಜಿಮ್​, ಕ್ರೀಡಾಂಗಣಗಳು, ಸ್ವಿಮ್ಮಿಂಗ್​ ಪೂಲ್​ಗಳನ್ನು ಮುಚ್ಚಲಾಗುವುದು. ಎಲ್ಲ ಧಾರ್ಮಿಕ ಸ್ಥಳಗಳು ಬಾಗಿಲು ಮುಚ್ಚಿರಲಿವೆ.

ಆಸ್ಪತ್ರೆಗಳು, ತುರ್ತು ಸೇವೆಗಳು, ವೈದ್ಯಕೀಯ ವಲಯಕ್ಕೆ ಸೇರಿದ ಕೇಂದ್ರಗಳು, ಗಾರ್ಮೆಂಟ್​ಗಳು, ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಕಚೇರಿಗಳು (ಶೇ. 50 ಸಿಬ್ಬಂದಿ) ಎಂದಿನಂತೆ ತೆರೆದಿರಲಿವೆ. ಈ ಸ್ಥಳಗಳಲ್ಲೂ ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸವಂತೆ ತಿಳಿಸಲಾಗಿದೆ. (ಏಜೆನ್ಸೀಸ್​)

ಇನ್ನಷ್ಟು ಮಾಹಿತಿಗಾಗಿ: