ನ್ಯೂಸ್

ಕ್ಷಮೆ ಕೇಳಿ, ಇಲ್ಲ ಕರ್ನಾಟಕದಲ್ಲಿ ರಿಲೀಸ್​ ಯಾಕೆ? ನಟ ಕಮಲ್​ ಹಾಸನ್​ಗೆ ಹೈಕೋರ್ಟ್​ ತರಾಟೆ | Kamal Haasan

ಬೆಂಗಳೂರು: ಇಂದು (ಜೂ.03) ತಮಿಳು ನಟ ಕಮಲ್ ಹಾಸನ್ (Kamal Haasan) ತಮ್ಮ ಸಿನಿಮಾ 'ಥಗ್​ ಲೈಫ್'​ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೊಳಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ನಟನನ್ನು ಹಿಗ್ಗಾಮುಗ್ಗಾ ಥರಾಟೆಗೆ ತೆಗೆದುಕೊಂಡಿದೆ.

ಕಮಲ್ ಹಾಸನ್​ 'ಕನ್ನಡ ತಮಿಳಿನಿಂದ ಹುಟ್ಟಿದ್ದು' ಎಂಬ ಹೇಳಿಕೆಯ ವಿಡಿಯೋ ವೀಕ್ಷಣೆ ಮಾಡಿದ ನ್ಯಾ. ನಾಗಪ್ರಸನ್ನ ಅವರ ಪೀಠವು, "ಈ ಹಿಂದೆ 1950ರಲ್ಲಿ ಜಿ. ರಾಜಗೋಪಾಲಚಾರಿ ಇದೇ ರೀತಿ ಹೇಳಿಕೆ ಕೊಟ್ಟಿದ್ದರು. ಆ ನಂತರ ಕ್ಷಮೆ ಕೋರಿದ್ದರು. ನೀವು ಇಲ್ಲಿಯವರೆಗೂ ಕ್ಷಮೆಯಾಚಿಸಿಲ್ಲ. ಧಕ್ಕೆ ತಂದು ನಿಮ್ಮ ಚಿತ್ರದ ರಿಲೀಸ್​ ಬಯಸುತ್ತೀದ್ದೀರಾ?" ಎಂದು ಕಮಲ್​ ಪರ ವಕೀಲರಿಗೆ ಪ್ರಶ್ನಿಸಿತು.

"ವಾಣಿಜ್ಯ ಉದ್ದೇಶದಲ್ಲಿ ಸಿನಿಮಾ ಮಾಡಿದ್ದೀರಾ, ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕಾ? ಇದರಲ್ಲಿ ನಿಮ್ಮ ನಿಲುವು ಏನು? ತಿಳಿಸಿ" ಎಂದು ನ್ಯಾಯಾಧೀಶರು ಕೇಳಿದ್ದಾರೆ. ಸದ್ಯ ವಿಚಾರಣೆಯನ್ನು ಇಂದು ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ.