ಬೆಂಗಳೂರು: ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಹಂತಹಂತವಾಗಿ ನಡೆಯುತ್ತಿದೆ. ಇದೀಗ ಒಂದೇ ದಿನ 45 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ನೂತನ ಆದೇಶ ಹೊರಡಿಸಿದೆ.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸೂಚಿಸಲಾಗಿದ್ದು, ಈ ಕೆಳಗಿನ ಪಟ್ಟಿಯಲ್ಲಿ ವರ್ಗಾವಣೆ ಆಗಿರುವ ಇನ್ಸ್ಪೆಕ್ಟರ್ಗಳು ಮತ್ತು ಅವರ ಹೊಸ ಕಾರ್ಯಸ್ಥಾನಗಳನ್ನು ನಮೂದಿಸಲಾಗಿದೆ.