ನ್ಯೂಸ್

ಬಿಜೆಪಿ ಕಾಲದ ಪಠ್ಯ ಪುಸ್ತಕ ಪರಿಷ್ಕರಿಸಲು ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಬಿಜೆಪಿ ಕಾಲದ ಪಠ್ಯ ಪುಸ್ತಕ ಪರಿಷ್ಕರಿಸುವಂತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ 6 ರಿಂದ 10ನೇ ತರಗತಿ ಪಠ್ಯಗಳಲ್ಲಿನ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಪಾಡು ಆಗಲಿದೆ.

2023-24ನೇ ಸಾಲಿನಲ್ಲಿ ಜಾರಿಯಲ್ಲಿರುವ ಪಠ್ಯ ಪುಸ್ತಕದ ಕೆಲವು ಅಧ್ಯಾಯಗಳನ್ನು ಬದಲಿಸುತ್ತೇವೆ ಯಾವ ಪಠ್ಯ ಸೇರಿಸಬೇಕು ಅಥವಾ ಯಾವುದನ್ನು ಸೇರಿಸಬಾರದು ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು.

6 ರಿಂದ 10ನೇ ತರಗತಿಯಲ್ಲಿನ ಪ್ರತಮ, ದ್ವಿತೀಯ ಭಾಷೆ, ಸಮಾಜ ವಿಜ್ಞಾನದಲ್ಲಿನ ಕೆಲವು ಪಾಠಗಳನ್ನು ಬದಲಾವಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುರವಿ ಹೊರೆಯಾಗದಂತೆ ಹೊಸ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿತ್ತು.

ಬದಲಾವಣೆಯಾದ ಪಠ್ಯಗಳ ವಿವರ ಇಂತಿವೆ