ನ್ಯೂಸ್

Karnataka Election Result 2023; ಬಿಜೆಪಿ ಸೋಲಿಗೆ ಕಾರಣಗಳೇನು…?

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಬಿಜೆಪಿಯ ಡಬಲ್​ ಇಂಜಿನ್​​ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದ್ದು, ಹೀನಾಯವಾಗಿ ಸೋಲು ಕಂಡಿದೆ. ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿದೆ. ಕಾಂಗ್ರೆಸ್ ನಾಯಕರು ಗೆಲುವಿನ ಸಂಭ್ರಮದಲ್ಲಿದ್ದಾರೆ.

ಕಾಂಗ್ರೆಸ್​​ 136 ಸ್ಥಾನ, ಬಿಜೆಪಿ 65, ಜೆಡಿಎಸ್ ​19, ಇತರ 4 ಸ್ಥಾನಗಳು ಬಂದಿದೆ. ಕಾಂಗ್ರೆಸ್​​ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕವಾಗಿ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿದೆ.

ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಬಿಜೆಪಿಯ ಪಕ್ಷದಲ್ಲಿರುವ ಅನೇಕ ಘಟಾನುಘಟಿ ನಾಯಕರುಗಳೇ ಹೀನಾಯವಾಗಿ ಸೋಲು ಕಂಡಿದ್ದಾರೆ. ಈ ನಾಯಕರುಗಳ ಸೋಲಿಗೆ ಕಾರಣವೇನು ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ.

ಬಿಜೆಪಿ ಸೋಲಿಗೆ ಸಂಭಾವ್ಯ ಕಾರಣಗಳು:

  • ಅತಿಯಾದ ಆತ್ಮವಿಶ್ವಾಸ
  • ಹೈಕಮಾಂಡ್ ನಾಯಕರ ಮೇಲೆ ಅತಿಯಾದ ಅವಲಂಬನೆ
  • ರಾಜ್ಯದಲ್ಲಿ ಕೈ ಹಿಡಿಯದ ನಮೋ ವರ್ಚಸ್ಸು, ನಮೋ ರೋಡ್ ಶೋಗಳು
  • ಫಲ‌ ಕೊಡದ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ
  • ರಾಜ್ಯದಲ್ಲಿ ಅತಿಯಾದ ಪ್ರಯೋಗ ಅಸ್ತ್ರಗಳು
  • 20 ಹಾಲಿಗಳಿಗೆ ಟಿಕೆಟ್ ಮಿಸ್ ನಿರ್ಧಾರ. 75 ಹೊಸಬರಿಗೆ ಟಿಕೆಟ್
  • ಯಡಿಯೂರಪ್ಪ ಕಡೆಗಣನೆ ಎಫೆಕ್ಟ್
  • ಶೆಟ್ಟರ್, ಸವದಿ ಸೇರಿದಂತೆ ಹಲವು ಲಿಂಗಾಯತ ನಾಯಕರ ಕಡೆಗಣನೆ
  • ಪರಿಣಾಮ ವೀರಶೈವ ಲಿಂಗಾಯತ ಮತವರ್ಗದ ವಿಭಜನೆ
  • ರಾಜ್ಯ ನಾಯಕರನ್ನು ಪರಿಗಣಿಸದ ಹೈಕಮಾಂಡ್ ನಾಯಕರ ಧೋರಣೆ
  • ಹಲವು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆಯ ಪರಿಣಾಮ
  • 40% ಕಮೀಷನ್ ಆರೋಪ, ಬೆಲೆ ಏರಿಕೆ ಪರಿಣಾಮ
  • ಒಕ್ಕಲಿಗ ಮತವರ್ಗದ ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲ
  • ಹಿಂದುತ್ವದ ಅಜೆಂಡಾ ಮೇಲೂ ಅವಲಂಬನೆ. ಕೈಕೊಟ್ಟ ಹಿಂದುತ್ವದ ಅಜೆಂಡಾ
  • ಫಲ‌ ಕೊಡದ ಮೀಸಲಾತಿ ಹೆಚ್ಚಳ ಅಸ್ತ್ರ ಮತ್ತು ಒಳಮೀಸಲಾತಿ ಹಂಚಿಕೆ ನಿರ್ಣಯ
  • ಎಚ್ಡಿಕೆ ಬಿಟ್ಟ ಪೇಶ್ವೆ ಬ್ರಾಹ್ಮಣ ವರ್ಸಸ್ ಲಿಂಗಾಯತ ಬಾಣದ ಎಫೆಕ್ಟ್
  • ಸಿಎಂ ಬೊಮ್ಮಾಯಿ ನಾಯಕತ್ವ ಗುಣ ಇಲ್ಲದಿರುವುದು, ಬೊಮ್ಮಾಯಿ ಸರ್ಕಾರದ ವೈಫಲ್ಯ
  • ಬಂಡಾಯ ಶಮನ ಮಾಡುವಲ್ಲಿ ಬಿಜೆಪಿ ನಾಯಕರ ವೈಫಲ್ಯ
  • ಕೆಲವು ಸಚಿವರ ನಿಷ್ಕ್ರಿಯತೆ, ವೈಫಲ್ಯ
  • ಸರ್ಕಾರದ ಅವಧಿಯಲ್ಲಿ ಕೇಳಿಬಂದ ಕಮೀಷನ್ ಆರೋಪ, ಪಿಎಸ್ಐ ಅಕ್ರಮ ಪ್ರಕರಣ, ಬಿಟ್‌ಕಾಯಿನ್ ಹಗರಣ ಆರೋಪ, ಡ್ರಗ್ ಪ್ರಕರಣ, ಕೋವಿಡ್ ಸಂದರ್ಭದ ನಾನಾ ಆರೋಪಗಳ ಎಫೆಕ್ಟ್