ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಜನಾದೇಶ ಇಂದು ಹೊರಬಿಳಲಿದೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳಿಂದ ಒಂದೇ ಪಕ್ಷದಿಂದ ಅವರದ್ದೇ ಆಗಿರುವ ಕ್ಷೇತ್ರದಲ್ಲಿ ನಿಂತು ಗೆಲುವು ಸಾಧಿಸುತ್ತಾ ಬಂದಿರುವ ಘಟಾನುಘಟಿಗಳು ಹಿನ್ನಡೆ ಪಡೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆ ಘಟಾನುಘಟಿ ನಾಯಕರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ ರವಿ ಹಿನ್ನಡೆ ಪಡೆದುಕೊಂಡಿದ್ದಾರೆ. ಯಶ್ವಂತಪುರದ ಎಸ್.ಟಿ ಸೋಮಶೇಖರ್ ಅವರು ಮೊದಲ ಸುತ್ತಿನ ಮತ ಏಣಿಕೆಯಿಂದಲೂ ಭಾರಿ ಹಿನ್ನಡೆ ಪಡೆದುಕೊಂಡಿದ್ದಾರೆ. ಹೊಸಕೋಟೆ ಕ್ಷೇತ್ರದ ಅಭ್ಯರ್ಥಿ ಎಂ.ಟಿ,ಬಿ ನಾಗರಾಜ್ ಅವರು ಹಿನ್ನೆಡೆ ಪಡೆದಿದ್ದಾರೆ.
ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ಸ್ಪರ್ಧೆ ಮಾಡಿದ್ದ ಬಿಜೆಪಿಯ ಘಟಾನುಘಟಿ ನಾಯಕ ವಿ. ಸೋಮಣ್ಣ ಅವರು ಬಾರಿ ಹಿನ್ನಡೆ ಪಡೆದಿದ್ದಾರೆ. ವರುಣ ಹಾಗೂ ಚಾಮರಾಜನಗರದ ಎರಡು ಕ್ಷೇತ್ರದಲ್ಲಿಯೂ ಹಿನ್ನೆಡೆಯಲ್ಲಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗದ್ದುಗೆ ಗುದ್ದಾಟ ಎನ್ನುವುದಕ್ಕಿಂತ ಸಹೋದರ ನಡುವೆ ನಡೆಯುತ್ತಿರುವ ಒಂದು ರಾಜಕೀಯ ಹೋರಾಟವಾಗಿದೆ. ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಅವರು ಭಾರಿ ಹಿನ್ನಡೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಬಾರಿ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ನ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿ ದಿನೇಶ್ಗುಂಡೂರಾವ್ ಅವರು ಭಾರಿ ಹಿನ್ನಡೆಯಲ್ಲಿದ್ದಾರೆ. ದಾವಣಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹಿನ್ನೆಡೆ ಬಾರಿ ಪಡೆದಿದ್ದಾರೆ. ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹಾಗೂ ಕೊಳ್ಳೆಗಾಲ ಕ್ಷೇತ್ರದ ಎನ್ ಮಹೇಶ್ ಅವರು ಹಿನ್ನೆಡೆ ಸಾಧಿಸಿದ್ದಾರೆ. ಈ ಮೂಲಕವಾಗಿ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ಹಲವು ಘಟಾನುಘಟಿ ನಾಯಕರಿದ್ದಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ದೊರೆಯಲಿಲ್ಲ. ಉಳಿದಂತೆ ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಈ ಸರ್ಕಾರ ಕೇವಲ ಒಂದು ವರ್ಷ ಮಾತ್ರ ಪೂರೈಸಿತು. ಬದಲಾದ ರಾಜಕೀಯ ಚಿತ್ರಣದಲ್ಲಿ ಮೈತ್ರಿ ಸರ್ಕಾರದ 17 ಶಾಸಕರು ಬಿಜೆಪಿ ಜತೆ ಕೈಜೋಡಿಸಿದ್ದರಿಂದ ಬಿಜೆಪಿ ಸರ್ಕಾರ ರಚನೆ ಮಾಡಿತು.
2018ರ ಫಲಿತಾಂಶ ಏನಿತ್ತು?