ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5ರವರೆಗೆ) ರಾಜ್ಯದಲ್ಲಿ 3693 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು 115 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟೂ ಮೃತಪಟ್ಟವರ ಸಂಖ್ಯೆ 1147ಕ್ಕೆ ಏರಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕು ಪೀಡಿತರಾದವರ ಸಂಖ್ಯೆ 55,115 ಆಗಿದೆ. ಈ ಪೈಕಿ 33,205 ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 568 ಮಂದಿ ಐಸಿಯುನಲ್ಲಿ ಇದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದವರ ಸಂಖ್ಯೆ 20,757.
ಜಿಲ್ಲಾವಾರು ಸೋಂಕಿತರ ಸಂಖ್ಯೆ ಈ ರೀತಿ ಇದೆ. ಒಂದು ದಿನದ ವಿವರ ಹಾಗೂ ಒಟ್ಟಾರೆ ಸೋಂಕಿತರು
ಬೆಂಗಳೂರು ನಗರ 2208 (ಒಟ್ಟೂ 27,496)
ಧಾರವಾಡ 157 (1731)
ಬಳ್ಳಾರಿ 133 (2200)
ವಿಜಯಪುರ 118 (1238)
ಬೆಳಗಾವಿ 95 (789)
ಮೈಸೂರು 93 (1413)
ಕಲಬುರಗಿ 89 (2592)
ಉಡುಪಿ 80 (1980)
ಉತ್ತರ ಕನ್ನಡ 75 (900)
ಬೀದರ್ 69 (1260)
ಗದಗ 59 (473)
ಹಾವೇರಿ 58 (389)
ಕೋಲಾರ 51 (426)
ದಕ್ಷಿಣ ಕನ್ನಡ 39 (2797)
ತುಮಕೂರು 36 (600)
ರಾಯಚೂರು 33 (948)
ಬೆಂಗಳೂರು ಗ್ರಾಮಾಂತರ 33 (473)
ದಾವಣಗೆರೆ 31 (689)
ಚಿಕ್ಕಬಳ್ಳಾಪುರ 31 (598)
ಕೊಪ್ಪಳ 30 (419)
ಬಾಗಲಕೋಟೆ 29 (616)
ಚಿಕ್ಕಮಗಳೂರು 28 (228)
ಚಿತ್ರದುರ್ಗ 24 (178)
ಮಂಡ್ಯ 22 (820)
ಹಾಸನ 21 (791)
ರಾಮನಗರ 14 (410)
ಕೊಡಗು 13 (249)
ಶಿವಮೊಗ್ಗ 10 (615)
ಚಾಮರಾಜನಗರ 10 (222)
ಯಾದಗಿರಿ 4 (1539)