ಬೆಂಗಳೂರು: ಇಂದು ಕರೊನಾ ಸೋಂಕು ಮಹಿಳೆಯರ ಮೇಲೆ ಮುನಿಸು ತೋರಿದಂತೆ ಕಾಣುತ್ತಿದೆ. ಏಕೆಂದರೆ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪತ್ತೆಯಾಗಿರುವ 12 ಹೊಸ ಸೋಂಕಿತರಲ್ಲಿ 10 ಮಂದಿ ಸ್ತ್ರೀಯರೇ ಇದ್ದಾರೆ. ಇದರಲ್ಲಿ 13 ವರ್ಷದ ಬಾಲಕಿ ಹಾಗೂ 19 ವರ್ಷದ ಯುವತಿಯೂ ಸೇರಿದ್ದಾರೆ.
ದಾವಣಗೆರೆಯಲ್ಲಿ ಸೋಂಕಿನ ಪ್ರಮಾಣ ಏರುತ್ತಲೇ ಇದ್ದು, ಈಗ ಪುನಃ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ.
ಉಳಿದಂತೆ ಕಲಬುರಗಿಯಲ್ಲಿ ಮೂರು, ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 3, ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ, ಬೆಂಗಳೂರು ನಗರ ಹಾಗೂ ಧಾರವಾಡದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.
ಇಂದಿನ ಹೊಸ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡರೆ ಇಲ್ಲಿಯವರೆಗೆ ರಾಜ್ಯದಲ್ಲಿ ಕರೊನಾ ಸೋಂಕು ತಗುಲಿದವರ ಸಂಖ್ಯೆ 705 ಆಗಿದೆ. ಈ ಪೈಕಿ 366 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದನ್ನೂ ಓದಿ: ಇಬ್ಬರು ಹೆಂಡಿರ ಮುದ್ದಿನ ಗಂಡನಿಗೆ ಲಾಕ್ಡೌನ್ ಪೇಚು, ಪತಿಯನ್ನು ಕರೆತರುವಂತೆ ಪೊಲೀಸರಿಗೆ ಫೋನಾಯಿಸಿದ ಹಿರಿಯ ಪತ್ನಿ
ಕರೊನಾ ಮಹಾಮಾರಿ ಕರ್ನಾಟಕದಲ್ಲಿ ಈವರೆಗೆ 30 ಮಂದಿಯನ್ನು ಬಲಿ ಪಡೆದಿದೆ.
ನಿಮ್ಮ ಜಿಲ್ಲೆಯ ವಿವರ ಇಲ್ಲಿದೆ: