ಬೆಂಗಳೂರು: ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದಾದ ಒಂದು ವಾರದ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಇಂದು (ಮೇ 27) ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಇದೀಗ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಯಾರಿಗೆ, ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಇದೀಗ ಮೂಡಿದೆ. ಕೆಲ ಪ್ರಭಾವಿ ಸಚಿವರು ತಮಗೇ ಇಂತಹದ್ದೇ ಖಾತೆ ಬೇಕೆಂದು ಬೇಡಿಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಸಧ್ಯದಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಲಿದ್ದು, ಜನರ ಕುತೂಹಲಕ್ಕೆ ಉತ್ತರ ಸಿಗಲಿದೆ. ಅಂತೆಯೇ ಸಚಿವರುಗಳಿಗೆ ಹಂಚಿಕೆಯಾಗಲಿರುವ ಸಂಭಾವ್ಯ ಖಾತೆಗಳು ಹೀಗಿವೆ...
ಸಚಿವರ ಸಂಭಾವ್ಯ ಖಾತೆಗಳು
- ಸಿದ್ದರಾಮಯ್ಯ- ಹಣಕಾಸು, ಗುಪ್ತಚರ
- ಡಿ.ಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
- ಜಿ. ಪರಮೇಶ್ವರ್- ಗೃಹ ಖಾತೆ
- ಎಚ್. ಕೆ ಪಾಟೀಲ್- ಕಾನೂನು ಮತ್ತು ಸಂಸದೀಯ ವ್ಯವಕಾರ
- ಕೆ.ಎಚ್ ಮುನಿಯಪ್ಪ- ಆಹಾರ ಮತ್ತು ನಾಗರಿಕ ಸರಬರಾಜು ಖಾತೆ
- ಕೆ.ಜೆ ಜಾರ್ಜ್- ಇಂಧನ
- ಎಂ.ಬಿ ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಐಟಿ-ಬಿಟಿ
- ರಾಮಲಿಂಗರೆಡ್ಡಿ- ಸಾರಿಗೆ
- ಸತೀಶ್ ಜಾರಕಿಹೋಳಿ- ಲೋಕೋಪಯೋಗಿ ಇಲಾಖೆ
- ಪ್ರಿಯಾಂಕ ಖರ್ಗೆ- ಗ್ರಾಮೀಣಾಭಿವೃದ್ಧಿ, ಪಂಚಯಾತ್ ರಾಜ್ ಇಲಾಖೆ
- ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ
- ಕೃಷ್ಣ ಬೈರೇಗೌಡ- ಕಂದಾಯ
- ದಿನೇಶ್ ಗುಂಡುರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ಚೆಲುವರಾಯಸ್ವಾಮಿ- ಕೃಷಿ
- ಹೆಚ್.ಸಿ ಮಹಾದೇವಪ್ಪ- ಸಮಾಜ ಕಲ್ಯಾಣ ಇಲಾಖೆ
- ಕೆ.ವೆಂಕಟೇಶ್- ಪಶುಸಂಗೋಪನೆ
- ಈಶ್ವರ್ ಖಂಡ್ರೆ- ಪರಿಸರ ಮತ್ತು ಜೀವಶಾಸ್ತ್ರ
- ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ
- ಕೆ.ಎನ್.ರಾಜಣ್ಣ- ಸಹಕಾರ ಖಾತೆ
- ಶಿವಾನಂದ ಪಾಟೀಲ್- ಜವಳಿ ಮತ್ತು ಸಕ್ಕರೆ ಖಾತೆ
- ಆರ್.ಬಿ. ತಿಮ್ಮಾಪುರ- ಅಬಕಾರಿ ಮತ್ತು ಮುಜರಾಯಿ
- ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ
- ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ
- ಶರಣಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ
- ಲಕ್ಷ್ಮಿ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಮಂಕಾಳ ವೈದ್ಯ- ಬಂದರು ಮತ್ತು ಮೀನುಗಾರಿಕೆ
- ರಹೀಂ ಖಾನ್- ಪೌರಾಡಳಿತ ಮತ್ತ ಹಜ್
- ಡಿ.ಸುಧಾಕರ್- ಯೋಜನೆ ಇಲಾಖೆ
- ಸಂತೋಷ್ ಲಾಡ್- ಕಾರ್ಮಿಕ ಇಲಾಖೆ ಮತ್ತು ಕೌಶಲ್ಯ ಅಭಿವೃದ್ಧಿ
- ಎಂ.ಎಸ್ ಭೋಸರಾಜ್- ಪ್ರವಾಸೋದ್ಯಮ ಇಲಾಖೆ
- ಭೈರತಿ ಸುರೇಶ್- ನಗರಾಭಿವೃದ್ಧಿ ಇಲಾಖೆ
- ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ಎಂ.ಸಿ.ಸುಧಾಕರ್- ವೈದ್ಯಕೀಯ ಶಿಕ್ಷಣ
- ಬಿ.ನಾಗೇಂದ್ರ- ಯುವಜನ ಕ್ರೀಡಾ ಮತ್ತು ಕನ್ನಡ, ಸಂಸ್ಕೃತಿ ಇಲಾಖೆ