ನ್ಯೂಸ್

ದೀಪಾವಳಿಯಂದೇ ದಿವಾಳಿ ಮಾಡಿದ್ದೀರಿ..'ದುಬಾರಿ' ಬಂಪರ್ ಗಿಫ್ಟ್​ಗೆ ಥ್ಯಾಂಕ್ಯೂ; ಹಾಲು, ಬಸ್ ಟಿಕೆಟ್ ದರ ಏರಿಸಿದ ಸರ್ಕಾರಕ್ಕೆ ಸಖತ್ ಕ್ಲಾಸ್..Bus Fare Hikes

  • ಹಾಲಿನ ದರ ಏರಿಕೆ ಬೆನ್ನಲ್ಲೇ, ಬಸ್ ಪ್ರಯಾಣದ ದರ ಏರಿಸಿದ ಕಾಂಗ್ರೆಸ್ ಸರ್ಕಾರ .

  • ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ.

  • ಖಾಸಗಿ ವಾಹನ ಖರೀದಿಗೆ ಉತ್ತೇಜಿಸುತ್ತಿರುವ ಸರ್ಕಾರಕ್ಕೆ ಧನ್ಯವಾದ ಎಂದ ಜನರು.

  • ಪ್ರಯಾಣದ ಟಿಕೆಟ್​ಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರಯಾಣಿಕರು

ಬೆಂಗಳೂರು: 'ಕರ್ನಾಟಕ ಸರ್ಕಾರ ಥ್ಯಾಂಕ್ಯೂ..ದೀಪಾವಳಿ ಹಬ್ಬದಂದೇ ನಮ್ಮನ್ನು ಅದ್ದೂರಿಯಾಗಿ ದಿವಾಳಿ ಮಾಡಿದ್ದಕ್ಕಾಗಿ'...'80 ರೂಪಾಯಿ ಇದ್ದ ಟಿಕೆಟ್​ ದರ 102 ರೂಪಾಯಿ ಮಾಡುವ ಮೂಲಕ ಬಂಪರ್​ ಗಿಫ್ಟ್ ಕೊಟ್ಟಿದ್ದೀರಿ'. ಸಾರ್ವಜನಿಕ ಸಾರಿಗೆಗಳ ಸೌಲಭ್ಯದ ದರ ಏರಿಕೆ ಮಾಡುತ್ತಾ..ಖಾಸಗಿ ವಾಹನಗಳ ಖರೀದಿಗೆ ಪ್ರೇರೇಪಿಸುತ್ತಿರುವ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ..ಹೀಗೆ ಸಾರ್ವಜನಿಕರು ಸರ್ಕಾರದ ವಿರುದ್ಧ ತಮ್ಮ ಬೇಸರವನ್ನು ಸೋಶಿಯಲ್​ ಮೀಡಿಯಾಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಹೌದು..ನಾಡಿನ ಜನರು ಈಗಾಗಲೇ ಬರದಿಂದ ಬೇಸತ್ತಿದ್ದಾರೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಈ ಮಧ್ಯೆ ಹಾಲು ಮತ್ತು 4 ಸಾರಿಗೆ ನಿಗಮಗಳ ಬಸ್ ಪ್ರಯಾಣದ ದರ ಏರಿಕೆ ಮಾಡಿರುವುದು ಸರ್ಕಾರದ ವಿರುದ್ಧ ಸಾರ್ವಜನಿಕರು ಮತ್ತಷ್ಟು ಕೆಂಡಕಾರಲು ಪ್ರಮುಖ ಕಾರಣವಾಗಿ ಪರಿಣಮಿಸಿದೆ.

ಬಸ್ ಟಿಕೆಟ್, ಹಾಲಿನ ದರ ಏರಿಕೆ

ಹಾಲಿನ ದರ ಏರಿಕೆ ಬಳಿಕ ನಿರೀಕ್ಷೆಯಂತೆ ಸರ್ಕಾರಿ ಸಾರಿಗೆ ಪ್ರಯಾಣ ದರವೂ ಹೆಚ್ಚಳವಾಗಿದೆ. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್ ಟಿಸಿ, ಕೆಕೆಆರ್ ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಸರಾಸರಿ ಶೇ.23ರಿಂದ 35ರವರೆಗೆ ಏರಿಕೆ ಮಾಡಲಾಗಿದೆ ಎಂದು ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡರು.

ಸಾರ್ವಜನಿಕರಿಂದ ಆಕ್ಷೇಪ

ಕೆಎಸ್​​ಆರ್​ಟಿಸಿ ಬಸ್​​​​​ ದರ ಏರಿಕೆಯೂ ಕಡಿಮೆ ಕಿಲೋ ಮೀಟರ್ ಸಂಚರಿಸುವ ಪ್ರಯಾಣಿಕರ ಮೇಲೂ ಬೀರಿದೆ. ಬಳ್ಳಾರಿಯಿಂದ ಕುರುಗೋಡು ದರ ಏರಿಕೆಗೂ ಮುನ್ನ 35 ಇತ್ತು ಈಗ 44 ರೂಪಾಯಿ ಆಗಿದೆ. ಬರೋಬ್ಬರಿ 9 ರೂಪಾಯಿ ಜಾಸ್ತಿ ಮಾಡಿದ್ದಾರೆ.ದರ ಏರಿಕೆಯಿಂದಾಗಿ ಅಲ್ಪ ದೂರಪ್ರಯಾಸುವ ಪ್ರಯಾಣಿಕರಿಗೂ ಸಮಸ್ಯೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಬಂಪರ್ ಗಿಫ್ಟ್ ಕೊಟ್ರಿ

ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣಿಸಲು ಈ ಹಿಂದೆ 447 ರೂಪಾಯಿ ಪಡೆದುಕೊಳ್ಳಲಾಗುತ್ತಿತ್ತು. ಈಗ 534 ರೂಪಾಯಿ ಪಡೆದುಕೊಳ್ಳಲಾಗುತ್ತಿದೆ. ಬರೋಬ್ಬರಿ 87ರೂಪಾಯಿ ಏರಿಕೆ ಮಾಡಿದ್ದಾರೆ. ಒಂದೇ ಬಾರಿಗೆ ಇಷ್ಟೊಂದು ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ ಸಾರ್ವಜನಿಕರು.

ದೀಪಾವಳಿ ಹಬ್ಬಕ್ಕೆ...ದಿವಾಳಿ ಉಡುಗರೆ ಮುಂಚೆ ಸಾಗರದಿಂದ ಶಿರಾಕ್ಕೆ ಪ್ರಯಾಣಿಸಲು 82 ರೂಪಾಯಿ ಇತ್ತು. ಈಗ 102 ರೂಪಾಯಿ ಆಗಿದೆ. ನಿಮ್ಮ ಸರ್ವ ಜನಾಂಗದ ಶಾಂತಿಯ ತೋಟ ಎಂದು ಮತ್ತೊಬ್ಬ ಎಕ್ಸ್​ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರಿಂದ ಕಲ್ಬುರ್ಗಿಗೆ KSRTC ಯ ಸಾಧಾರಣ ಬಸ್ ನಲ್ಲಿ ಪ್ರಯಾಣ ಮಾಡಲು ಸುಮಾರು 1000 ರೂಪಾಯಿ ತೆರಬೇಕು. ಇದು ಯಾವ ಸೀಮೆ ಬಡವರ ಸರ್ಕಾರ? ಈ ಮೊದಲು ಕೂಡ ಹಲವಾರು ಸರ್ಕಾರಗಳ ಬೆಲೆ ಏರಿಕೆಯನ್ನು ಕಂಡಿದ್ದೆವು; ಆದರೆ, ಏಕಾಏಕಿ 30% ಕ್ಕೂ ಹೆಚ್ಚು ಬೆಲೆ ಏರಿಸಿದ ಅಸಮರ್ಥ ಹಾಗೂ ಅಯೋಗ್ಯ ಸರ್ಕಾರ ನಿಮ್ಮದೆ ಎಂದು ಕಿಡಿಕಾರಿದ್ದಾರೆ.

ಹಣ ಇರಲಿ

ಕೆಎಸ್​ಆರ್​ಟಿಸಿ ಹೊಸ ಸ್ಲೋಗನ್​​​​ ಪ್ರಾಣಿಗಳ ಮೇಲೆ ದಯೆ ಇರಲಿ ಅಲ್ಲ, ಪ್ರಯಾಣಿಕರಲ್ಲಿ ದುಡ್ಡಿರಲಿ ಎಂದು ಬದಲಾಗಲಿ ಎನ್ನುತ್ತಾ ಹೆಣ್ಮಕ್ಳಿಗೆ ಬರೋ ಗೃಹಲಕ್ಷ್ಮಿ ಹಣವೆಲ್ಲ ಬಸ್ಸು, ಹಾಲಿಗೆ ಖರ್ಚು ಆಗೋ ಥರ ಇದೆ. ಎಂದು ಲೇವಡಿ ಮಾಡಿದ್ದಾರೆ.

'ಗರಿಷ್ಠ ಹೆಚ್ಚಳ ಕೇವಲ...ನಾನು ಪುನರುಚ್ಚರಿಸುತ್ತೇನೆ, ಕೇವಲ 80ರೂ. ಅಷ್ಟೇ'. ಈ ಸಚಿವರಿಗೆ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂದೂ ಆತನಿಗೆ ತಿಳಿದಿಲ್ಲ. ಇವರೆಲ್ಲ ಮಂತ್ರಿಗಳು ಎಂದು ಬೈರತಿ ಸುರೇಶ್​ ಅವರ ವಿರುದ್ಧ ಕೆಂಡಕಾರಿದ್ದಾರೆ,. ಬನಶಂಕರಿಯಿಂದ ಕದಿರೇನಹಳ್ಳಿಗೆ ಈ ಹಿಂದೆ 5 ರೂಪಾಯಿ ಇತ್ತು. ಈಗ10 ರೂಪಾಯಿಗೆ ಸಿಗುತ್ತದೆ & ಅದೇ ಟಿಕೆಟ್ ಮಹಿಳೆಯರಿಗೆ ಉಚಿತವಾಗಿದೆ ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

ಉತ್ತರ ಕರ್ನಾಟಕದ ಮಂದಿಗೆ ಸಮಸ್ಯೆ

ಸದ್ಯ ಉತ್ತರ ಕರ್ನಾಟಕದ ಹಲವಾರು ಮಂದಿ ಬೆಂಗಳೂರಿನಿಂದ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಇದೇ ಸಮಯದಲ್ಲಿ ಸರ್ಕಾರ ಬೇಕಂತ ಟಿಕೆಟ್​​ ದರ ಏರಿಕೆ ಮಾಡಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಜನರಿಗೆ ಕೊಂಚ ನೆಮ್ಮದಿ ನೀಡುವ ಬದಲು, ಕಾಂಗ್ರೆಸ್ ಸರ್ಕಾರವು ಬಸ್ ದರವನ್ನು ಮತ್ತೊಮ್ಮೆ ಏರಿಸುವ ಮೂಲಕ ಅವರಿಗೆ ಬರೆ ಎಳೆದಿದೆ. ಕಾಂಗ್ರೆಸ್ ಸರ್ಕಾರ ನೀಡಿರುವ ಏಕೈಕ 'ಗ್ಯಾರಂಟಿ' ಎಂದರೆ ಅದು ಬೆಲೆ ಏರಿಕೆ ಮಾತ್ರ. ಈ ಸರ್ಕಾರದ ವೈಫಲ್ಯಗಳಿಗೆ ಸಾಮಾನ್ಯ ಕನ್ನಡಿಗರು ಏಕೆ ಬೆಲೆ ತೆರಬೇಕು ಎಂದು ಹೇಳಿದ್ದಾರೆ.

ಟಿಕೆಟ್ ಬೆಲೆ ಎಷ್ಟಿದೆ?

ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ದರ 10 ರೂ.ನಿಂದ ಗರಿಷ್ಠ 44 ರೂ.ಗೆ ಏರಿಕೆಯಾಗಿದ್ದರೆ, ವಜ್ರ ಬಸ್‌ಗಳಲ್ಲಿ 20 ರೂ.ರಿಂದ 75 ರೂ. ಮತ್ತು ವಾಯುವಜ್ರ ಬಸ್‌ಗಳಲ್ಲಿ 300 ರೂ.ನಿಂದ 425 ರೂ.ವರೆಗೆ ದರ ಹೆಚ್ಚಿಸಲಾಗಿದೆ. ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರವನ್ನು (ಮೊದಲ ಸ್ಟೇಜ್ ಅಥವಾ 2 ಕಿ.ಮೀ ವರೆಗೆ) 6 ರೂ.ನಿಂದ 10 ರೂ.ಗೆ ಹೆಚ್ಚಿಸಲಾಗಿದೆ. ದೂರದ ಪ್ರಯಾಣಿಕರಿಗೆ ಗರಿಷ್ಠ 12 ರೂ.ವರೆಗೆ ಏರಿಕೆ ಮಾಡಲಾಗಿದ್ದು, ಕೆಂಪೇಗೌಡ ಬಸ್ ನಿಲ್ದಾಣದಿಂದ ಅತ್ತಿಬೆಲೆ ಅಥವಾ ದೇವನಹಳ್ಳಿಗೆ ತೆರಳಲು ಇದ್ದ 30 ರೂ. ದರ ಈಗ 42ಕ್ಕೆ ತಲುಪಿದೆ. ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ದರವೂ ಗಣನೀಯವಾಗಿ ಹೆಚ್ಚಿದೆ. ಕೆಂಬನಿಯಿಂದ ಎರ್‌ಪೋರ್ಟ್‌ಗೆ ತೆರಳಲು 265 ಇದ್ದ ಶುಲ್ಕವು 300 ರೂ.ಗಳಿಗೆ ಏರಿಕೆಯಾಗಿದೆ, (ಏಜೆನ್ಸೀಸ್).