ನ್ಯೂಸ್

ಕರ್ಣಾಟಕ ಬ್ಯಾಂಕ್ ಮಾಜಿ ಅಧ್ಯಕ್ಷ ಅನಂತಕೃಷ್ಣ ಇನ್ನಿಲ್ಲ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ನಿವೃತ್ತ ಅಧ್ಯಕ್ಷ ಅನಂತಕೃಷ್ಣ(೭೪) ಅವರು ಭಾನುವಾರ ಮೃತರಾದರು.
ಮೂಲತಃ ಬಂಟ್ವಾಳದವರಾದ ಅನಂತಕೃಷ್ಣ ಕರ್ಣಾಟಕ ಬ್ಯಾಂಕ್‌ಗೆ ೧೯೭೧ರಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು. ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅವರು ೨೦೦೦ರಲ್ಲಿ ಅಧ್ಯಕ್ಷ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಉನ್ನತ ಸ್ಥಾನ ಪಡೆದರು. ೨೦೦೯ರ ವರೆಗೂ ಬ್ಯಾಂಕ್‌ನಲ್ಲಿದ್ದು ಬಳಿಕ ೨೦೧೬ರ ವರೆಗೆ ನಾನ್‌ ಎಕ್ಸಿ ಕ್ಯೂಟಿವ್‌ ಚೇರ್ಮನ್‌ ಆಗಿದ್ದರು.
ಅವರ  ನೇತೃತ್ವದಲ್ಲಿ ಬ್ಯಾಂಕ್‌ ದೇಶಾದ್ಯಂತ ಶಾಖೆಗಳನ್ನು ವಿಸ್ತರಿಸುವ ಕಾಯಕಕ್ಕೆ ಮುಂದಾಗಿತ್ತು. ಭಾರತೀಯ ಬ್ಯಾಂಕ್‌ಗಳ ಅಸೋಸಿಯಶನ್‌ನ ಗೌರವ ಕಾರ್ಯದರ್ಶಿಯೂ ಆಗಿದ್ದರು. ಅವರು ಪತ್ನಿ, ಓರ್ವ ಪುತ್ರ, ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.