ಮಂಗಳೂರು: ಇಲ್ಲಿನ ಬೈಕಂಪಾಡಿಯಲ್ಲಿರುವ ಕರ್ಕೇರ ಮೂಲಸ್ಥಾನ ಜಾರಂದಾಯ ದೈವಸ್ಥಾನ ಮತ್ತು ನಾಗಬ್ರಹ್ಮ ಪೀಠಕ್ಕೆ ಶನಿವಾರ ರಾತ್ರಿ ದುಷ್ಕರ್ಮಿಗಳು ಹಾನಿಯುಂಟುಮಾಡಿದ್ದಾರೆ.
ಈ ಘಟನೆಯನ್ನು ಹಿಂದು ಜಾಗರಣ ವೇದಿಕೆ ಸುರತ್ಕಲ್ ನಗರ ಸಮಿತಿ ಖಂಡಿಸಿದ್ದು ನೈಜ ಅಪರಾಧಿಗಳನ್ನು ಬಂಧಿಸುವಂತೆ ಆಗ್ರಹಿಸಿದೆ.
ಸುರತ್ಕಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.