ನ್ಯೂಸ್

ಮತ್ತೊಂದು ಮಗು ಹೊಂದಲು ಆಲಿಯಾಗೆ ಸಲಹೆ ನೀಡಿದ್ದೇಕೆ ಕರೀನಾ?

ಮುಂಬೈ: ರಾಹಾ ನಂತರ ಮತ್ತೊಂದು ಮಗುವನ್ನು ಹೊಂದುವಂತೆ ಕರೀನಾ ಕಪೂರ್ ಆಲಿಯಾ ಭಟ್‌ಗೆ ಸಲಹೆ ನೀಡಿದ್ದಾರೆ.

ಕಾಫಿ ವಿಥ್ ಕರಣ್ 8 ರ ಮುಂದಿನ ಸಂಚಿಕೆಯಲ್ಲಿ ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಇರಲಿದ್ದಾರೆ. ಕರಣ್ ಜೋಹರ್ ಶೋನಲ್ಲಿ ಆಲಿಯಾಗೆ ತನ್ನ ಕುಟುಂಬವನ್ನು ವಿಸ್ತರಿಸಲು ಮುಂದಾಗುವಂತೆ ಕರೀನಾ ಕೇಳಿಕೊಂಡಿದ್ದಾರೆ.

ಕಾಫಿ ವಿಥ್ ಕರಣ್ 8 ಎಪಿಸೋಡ್ 4 ರಲ್ಲಿ ಕರೀನಾ ಕಪೂರ್ ಅವರ ಸೋದರಸಂಬಂಧಿ ರಣಬೀರ್ ಕಪೂರ್ ಅವರ ಪತ್ನಿ ಆಲಿಯಾ ಭಟ್ ಅವರೊಂದಿಗೆ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋನ ಪೋರ್ಟಲ್ ಪ್ರಕಾರ, ಕರೀನಾ ಆಲಿಯಾಗೆ ಮತ್ತೊಂದು ಮಗುವನ್ನು ಹೊಂದುವಂತೆ ಸಲಹೆ ನೀಡಿದ್ದಾಳೆ. ಕಳೆದ ವರ್ಷ ಆಲಿಯಾ ಮತ್ತು ರಣಬೀರ್ ಗೆ ರಾಹಾ ಹುಟ್ಟಿದ್ದಳು.

ಆಲಿಯಾ, ರಣಬೀರ್ ಜಗಳವಾಡುವುದೇಕೆ?: ಈ ತಿಂಗಳು ರಾಹಾ ಒಂದು ವರ್ಷಕ್ಕೆ ಕಾಲಿಟ್ಟಿದ್ದು, ಸಮಯ ಅಭಾವದಿಂದ ಆಲಿಯಾ ಮತ್ತು ರಣಬೀರ್​ ಹೆಚ್ಚುಹೊತ್ತು ಕಳೆಯಲು ಸಾಧ್ಯವಾಗುತ್ತಿಲ್ಲವಂತೆ. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳ ನಡೆಯುತ್ತದೆಯಂತೆ. ಆದರೆ ಜಗಳ ಸೀರಿಯಸ್​ ಆಗಿ ತೆಗೆದುಕೊಳ್ಳುವುದಿಲ್ಲವಂತೆ. ಈ ವಿಷಯ ಕೇಳಿಯೇ ರಾಹಾಳನ್ನು ನನಗೆ ಕೊಟ್ಟು ನೀವು ಜಗಳ ಕಡಿಮೆ ಮಾಡಿ, ಇನ್ನೊಂದು ಮಗು ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿಗೆ ಹಂಚಿಕೊಂಡ ಟೀಸರ್‌ನಲ್ಲಿ, ಆತಿಥೇಯ ಕರಣ್ ಜೋಹರ್ ಅವರು ಆಲಿಯಾ ಅವರನ್ನು 'ತನ್ನ ಮೊದಲ ಮಗು' ಎಂದೂ, ಕರೀನಾರನ್ನು 'ಸ್ಪಿರಿಟ್ ಸೋಲ್' ಎಂದು ವಿವರಿಸುವ ಮೂಲಕ ಪ್ರಾರಂಭಿಸುತ್ತಾರೆ. ನಂತರ ಮೂವರು ಕರೀನಾ ಮತ್ತು ಆಲಿಯಾ ಜೆಥಾನಿ ಮತ್ತು ನಾನದ್ ಅಥವಾ ಕರೀನಾ ಆಲಿಯಾಳ ಭಾಭಿಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಇದಕ್ಕೆ ಕರೀನಾ, ನಾನು ಯಾರ ಭಾಬಿಯೂ ಅಲ್ಲ ಎಂದಿದ್ದಾರೆ.