ಬಾ ಕರಾವಳಿಗೆ 
ನ್ಯೂಸ್

Karavali - ಕಟಪಾಡಿ ಕಂಬಳದಲ್ಲಿ ಮೊದಲ ಬಾರಿಗೆ ಶೂಟ್​ ಆದ ಚಿತ್ರ ಕರಾವಳಿ

Karavali -
ಪ್ರಜ್ವಲ್​ ದೇವರಾಜ್​, ರಾಜ್​ ಬಿ. ಶೆಟ್ಟಿ, ಸಂಪದಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಅಂಬಿ ನಿಂಗ್​ ವಯಸ್ಸಾಯ್ತೋ' ಖ್ಯಾತಿಯ ಗುರುದತ್​ ಗಾಣಿಗ ಆ್ಯಕ್ಷನ್​&ಕಟ್​ ಹೇಳಿರುವ ಸಿನಿಮಾ "ಕರಾವಳಿ'. ಈಗಾಗಲೇ ಟೀಸರ್​ ಮತ್ತು ಲುಕ್​ಗಳ ಮೂಲಕ ಗಮನ ಸೆಳೆದಿದ್ದು, ಇತ್ತೀಚೆಗಷ್ಟೇ ಶೀರ್ಷಿಕೆ ಗೀತೆ"ಸೋಲ್​ ಆ್​ ಕರಾವಳಿ' ಬಿಡುಗಡೆ ಮಾಡಲಾಯಿತು. "ಕಡಲಿಂದ ನಾಡು, ಕಡಲಿಂದ ಕಾಡು, ಕಡಲಿಂದ ತಾನೆ ಒಡಲಾಗೂಡು...' ಎಂದು ಸಾಗುವ ಈ ಹಾಡನ್ನು ಕಟಪಾಡಿ ಕಂಬಳ ಟ್ರ್ಯಾಕ್​​ನಲ್ಲಿ ಚಿತ್ರೀಕರಿಸಿರುವುದು ವಿಶೇಷ. ಕಟಪಾಡಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಏಳು ಶತಮಾನಗಳಿಂದಲೂ ಒಂದೇ ಕುಟುಂಬದ ತಲೆಮಾರುಗಳು ಈ ಕಂಬಳ ನಡೆಸಿಕೊಂಡು ಬರುತ್ತಿರುವುದು ಮತ್ತೊಂದು ವಿಶೇಷ. ಸಾಂಪ್ರದಾಯಿಕ ಕರಾವಳಿ ಕಂಬಳಗಳಲ್ಲಿ ಅತಿ ಹೆಚ್ಚು ಪ್ರಾಮುಖ್ಯವಿರುವ ಹೆಗ್ಗಳಿಕೆ ಕಟಪಾಡಿ ಕಂಬಳಕ್ಕೆ ಸಲ್ಲುತ್ತದೆ. ಇಂತಹ ಐತಿಹಾಸಿಕ ಕಂಬಳ ಟ್ರ್ಯಾಕ್​ನಲ್ಲಿ ಮೊದಲ ಬಾರಿ ಚಿತ್ರೀಕರಣಗೊಂಡ ಸಿನಿಮಾ ಎಂಬ ಹೆಗ್ಗಳಿಕೆ "ಕರಾವಳಿ'ಗೆ ಸಲ್ಲುತ್ತದೆ. ಪ್ರಮೋದ್​ ಮರವಂತೆ ಸಾಹಿತ್ಯ, ಸಚಿನ್​ ಬಸ್ರೂರ್​ ಸಂಗೀತದಲ್ಲಿ ಮೂಡಿಬಂದಿರುವ "ಸೋಲ್​ ಆ್​ ಕರಾವಳಿ'ಗೆ ಸಾಯಿ ಜ್ಞಾನೇಶ್​ ಧ್ವನಿಯಾಗಿದ್ದಾರೆ. ಪ್ರಜ್ವಲ್​, ರಾಜ್​, ಸಂಪದಾ ಜತೆ ಮಿತ್ರ, ರಮೇಶ್​ ಇಂದಿರ, ಶ್ರೀಧರ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೇ ಜು. 3ರಂದು "ಕರಾವಳಿ' ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆ ವಿತರಣೆಯ ಜವಾಬ್ದಾರಿ ಹೊತ್ತಿದೆ.