ತರೀಕೆರೆ: ಕರಾಟೆ ಆತ್ಮರಕ್ಷಣೆ ಮಾಡಿಕೊಳ್ಳುವ ವಿಶೇಷ ಕಲೆ. ಇದನ್ನು ಪ್ರತಿಯೊಬ್ಬರೂ ಕಲಿತರೆ ಆಪತ್ಕಾಲದಲ್ಲಿ ಸ್ವಯಂರಕ್ಷಣೆ ಮಾಡಿಕೊಳ್ಳಲು ನೆರವಿಗೆ ಬರುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಜಿಲ್ಲಾ ಕರಾಟೆ ೆಡರೇಷನ್‌ನಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಓಪನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕರಾಟೆ ಕಲಿಯುವುದರಿಂದ ಮನಸ್ಸು ಮತ್ತು ದೇಹ ಎರಡೂ ಸದೃಢವಾಗಿರುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಅನಿರೀಕ್ಷಿತವಾಗಿ ಎದುರಾಗುವ ಕಠಿಣ ಸನ್ನಿವೇಶಗಳಲ್ಲಿ ರಕ್ಷಣೆ ಮಾಡಿಕೊಳ್ಳಬೇಕು. ಪಟ್ಟಣದ ಕರಾಟೆ ತರಬೇತುದಾರ ರಿಯಾಜ್ ಸ್ವಹಿತಾಸಕ್ತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕರಾಟೆ ತರಬೇತಿ ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಕೆ.ವೀರೇಂದ್ರ ಮಾತನಾಡಿ, ಜಪಾನ್ ದೇಶದ ವಿಶಿಷ್ಟ ಕಲೆ ಕರಾಟೆ ಇಂದು ವಿಶ್ವಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಗಳು ಕಲಿಕಾ ಹಂತದಲ್ಲೇ ತರಬೇತಿ ಪಡೆದುಕೊಳ್ಳುವುದು ಉಪಯುಕ್ತ ಎಂದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ ತರಬೇತುದಾರ ರಿಯಾಜ್ ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದಾರೆ. ಸರ್ಕಾರ ಕರಾಟೆ ಕಲೆಯನ್ನು ಪಠ್ಯವಾಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕರಾಟೆ ೆಡರೇಷನ್ ಸಮಿತಿ ಅಧ್ಯಕ್ಷ ಆಲ್ತ್ಾ, ಪದಾಧಿಕಾರಿಗಳಾದ ವಿನೋದ್, ಆರ್ಮುಗಂ, ತರಬೇತುದಾರ ರಿಯಾಜ್ ಇತರರಿದ್ದರು.