ನ್ಯೂಸ್

ಕರಣ್ ಜೋಹರ್​ ಬರ್ತ್​ ಡೇ ಪಾರ್ಟಿಯಲ್ಲಿ ಪಾಲ್ಗೊಂಡ 50 ಬಾಲಿವುಡ್​ ಮಂದಿಗೆ ತಗುಲಿತಾ ಕರೊನಾ?: ಇಲ್ಲಿದೆ ಉತ್ತರ

ಮುಂಬೈ: ಬಾಲಿವುಡ್​​ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ಇತ್ತೀಚೆಗೆ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಮ್ಮ ಬರ್ತ್​ ಡೇ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್​​ ದಂಡೇ ಹರಿದುಬಂದಿತ್ತು. ಆದರೀಗ ಈ ಪಾರ್ಟಿಯಲ್ಲಿ ಪಾಲ್ಗೊಂಡ 50 ಮಂದಿಗೆ ಕರೊನಾ ಸೋಂಕು ತಗುಲಿದೆ ಎಂಬ ಬಗ್ಗೆ ವರದಿಯಾಗಿದ್ದು, ಇದರ ಸತ್ಯಾಸತ್ಯತೆ ಇಲ್ಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ  ಕರಣ್​ ಜೋಹರ್​ ಹುಟ್ಟುಹಬ್ಬ ಭಾರೀ ಅದ್ಧೂರಿಯಾಗಿ ನಡೆದಿತ್ತು, ಇದರಲ್ಲಿ ಸಲ್ಮಾನ್​ ಖಾನ್​, ವಿಕ್ಕಿ ಕೌಶಲ್​, ಕತ್ರಿನಾ ಕೈಫ್​​, ಕರೀನಾ ಕಪೂರ್​, ಐಶ್ವರ್ಯಾ ರೈ, ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಕಾಜಲ್​ ಹೀಗೇ ಎಲ್ಲಾ ಬಾಲಿವುಡ್​ ತಾರೆಯರು ಪಾಲ್ಗೊಂಡಿದ್ದರು.

ಆದರೀಗ ಈ ಹುಟ್ಟುಹಬ್ಬ ಆಚರಣೆ ವೇಳೆ ಕರೊನಾ ಸ್ಫೋಟಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಸಿನಿಮಾ ತಾರೆಯರಿಗೆ ಕೊವಿಡ್​ ತಗುಲಿದೆ ಎಂದು ಶನಿವಾರ ವರದಿಯಾಗಿತ್ತು. ಆದರೆ ಈ ಬಗ್ಗೆ  ಯಾರಿಗೂ ಕರೊನಾ ತಗುಲಿಲ್ಲ, ಹುಟ್ಟುಹಬ್ಬ ಆಚರಣೆ ವೇಳೆ ಕರೊನಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು ಎಂದು  ಹೇಳಲಾಗಿದೆ.

ಕರೊನಾ ಹರಡಿದೆ ಎಂಬುದು ಶುದ್ಧ ಸುಳ್ಳು, ಇದೊಂದು ವದಂತಿ ಎಂದು ಕಾರ್ಯಕ್ರಮ ಆಯೊಜಕರು ಸ್ಪಷ್ಟಪಡಿಸಿದ್ದಾರೆ. ಆದರೆ ಕರಣ್​ ಜೋಹರ್​ ಹುಟ್ಟಹಬ್ಬ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ನಟ ಕಾರ್ತಿಕ್​ ಆರ್ಯನ್​ಗೆ ಕರೊನಾ ಸೋಂಕು ದೃಢವಾಗಿರುವುದು ಮಾತ್ರ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. (ಏಜೆನ್ಸೀಸ್​)